“ದೇವಪ್ಪಜ್ಜ” ಮಣ್ಣಲ್ಲಿ ಮಣ್ಣಾಗುವ ಮುನ್ನ “ಹಂತಕ”ನ ವಶಕ್ಕೆ ಪಡೆದ ಹುಬ್ಬಳ್ಳಿ-ಧಾರವಾಡ ಪೊಲೀಸರು…!!!!

ಹುಬ್ಬಳ್ಳಿ: ಎಪಿಎಂಸಿ ಎದುರಿನ ಈಶ್ವರನಗರದಲ್ಲಿನ ವೈಷ್ಣೋದೇವಿ ಮಂದಿರದ ಧರ್ಮಾಧಿಕಾರಿ ದೇವಪ್ಪಜ್ಜನ ಕೊಲೆ ಪ್ರಕರಣವನ್ನ ಪತ್ತೆ ಮಾಡುವಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಯಶಸ್ವಿಯಾಗಿದೆ.
ಪ್ರಕರಣ ನಡೆಯುತ್ತಿದ್ದ ಹಾಗೇ ಪೊಲೀಸ್ ಕಮೀಷನರ್ ಎಸ್.ಶಶಿಕುಮಾರ್ ಗಂಭೀರವಾಗಿ ತೆಗೆದುಕೊಂಡು ತಾವೇ ಮುಂಚೂಣಿಯಲ್ಲಿ ನಿಂತು ತನಿಖೆಗೆ ಪೂರಕವಾಗಿ ಸಿಬ್ಬಂದಿಗಳನ್ನ ಫೀಲ್ಡ್‌ಗೆ ಇಳಿಸಿದ್ದರು.
ಅದರ ಪರಿಣಾಮವೇ ಆರೋಪಿ ಪತ್ತೆಯಾಗಿದ್ದಾನೆ. ದೇವಪ್ಪಜ್ಜನಿಂದ ತನ್ನ ಜೀವನದ “ಸಂತೋಷ” ಕಳೆದು ಹೋಗಿದೆ ಎಂದು ಹಲವು ವರ್ಷಗಳಿಂದಲೂ ಕೊಲೆಗೆ ಸಂಚು ರೂಪಿಸಿದ್ದವನೇ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಅ’ಸಂತೋಷ’ಗೊಂಡವನ ಸಂಪೂರ್ಣ ಜಾತಕವನ್ನ ಸ್ವತಃ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಕೆಲವೇ ಸಮಯದಲ್ಲಿ ಬಹಿರಂಗ ಮಾಡಲಿದ್ದಾರೆ.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್, ಎಸಿಪಿ ಶಿವಪ್ರಕಾಶ್ ನಾಯ್ಕ, ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ, ಪ್ರಭು ಗಂಗೇನಹಳ್ಳಿ ಸೇರಿದಂತೆ ಹಲವು ಠಾಣೆಯ ಇನ್ಸಪೆಕ್ಟರ್‌ಗಳು ತನಿಖೆಯಲ್ಲಿ ಭಾಗವಹಿಸಿದ್ದರು.