“ವಾರದ ಬಡ್ಡಿ” ಕಿರುಕುಳ- ಹಣ ಕೊಟ್ಟವನನ್ನೇ “ಎತ್ತಿದ” ಕಿರಾತಕರನ್ನ ಹೆಡಮುರಿಗೆ ಕಟ್ಟಿದ “PI ಶಿವಾನಂದ ಕಮತಗಿ” ಟೀಂ….

ಧಾರವಾಡ: ನವಲಗುಂದ ರಸ್ತೆಯ ಗೋವನಕೊಪ್ಪ ಬಳಿಯ ಖಾಸಗಿ ಲೇಔಟ್‌ನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಕರಣವನ್ನ ಪತ್ತೆ ಮಾಡುವಲ್ಲಿ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶಿವಾನಂದ ಕಮತಗಿ ತಂಡ ಯಶಸ್ವಿಯಾಗಿದೆ.
ಗೋವನಕೊಪ್ಪದ ಲೇಔಟ್‌ನಲ್ಲಿ ಹರೀಶ ಶಿಂಧೆ ಎಂಬಾತನನ್ನ ಸರ್ಫರಾಜ್ ನವಲೂರ ಹಾಗೂ ಸಾಹಿಲ್ ಎಂಬ ಇಬ್ಬರು ಹತ್ಯೆ ಮಾಡಿರುವ ಪ್ರಕರಣ ಬಯಲಿಗೆ ಬಂದಿದೆ.
ಹರೀಶ, ಒಂದು ಲಕ್ಷ ರೂಪಾಯಿ ಸಾಲ ನೀಡಿ ವಾರದ ಬಡ್ಡಿ ಪಡೆಯುತ್ತಿದ್ದ. ಇದೇ ಕಾರಣಕ್ಕೆ ಅತಿಯಾಗಿ ಪೀಡಿಸಿದ್ದರಿಂದ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ.
ಕೊಲೆ ಪ್ರಕರಣವನ್ನ ಕೆಲವೇ ಗಂಟೆಗಳಲ್ಲಿ ಪೊಲೀಸ್ ಇನ್ಸಪೆಕ್ಟರ್ ಶಿವಾನಂದ ಕಮತಗಿ ತಂಡ ಯಶಸ್ವಿಯಾಗಿದೆ.