ನಿವೃತ್ತ ಯೋಧನ ಕೊಲೆ ಮಾಡಿದ ಪಕ್ಕದ ಮನೆಯಾತ: ಪತ್ನಿಯೂ ಸಾವು

ಮಂಗಳೂರು: ಲಾಕ್ ಡೌನ್ ಆತಂಕದ ನಡುವೆಯೂ ಹಾಡುಹಗಲೇ ನಿವೃತ್ತ ಯೋಧ ಮತ್ತು ಆತನ ಪತ್ನಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಿನ್ನಿಗೋಳ ಏಳಿಂಜೆಯಲ್ಲಿ ನಡೆದಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ನಿವೃತ್ತ ಯೋಧ ವಿನ್ಸೆಂಟ್ ಡಿಸೋಜ ಮತ್ತು ಆತನ ಪತ್ನಿ ಹೆಲೆನ್ ಡಿಸೋಜಾ ಅವರನ್ನ ಪಿಕಾಸಿ ಹಾಗೂ ಹಾರೆಯಿಂದ ಹೊಡೆದಿರುವ ಆರೋಪಿ ಅಲ್ಫೋನ್ಸ್ ಸಲ್ಡಾನ್, ಪಕ್ಕದ ಜಾಗದ ಸಂಬಂಧವಾಗಿ ಹೀಗೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
ಕೊಲೆಯಾದ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಅವರ ಗೋಳಿಗ ಮುಗಿಲು ಮುಟ್ಟಿದೆ.