ದಾವಣಗೆರೆಯಲ್ಲಿ “ಅಂಜಲಿ ಹಂತಕ” ಸಿಕ್ಕಿದ್ದೇಗೆ..!? ಲಕ್ಷ್ಮೀ ಎಂಬ ಮಹಿಳೆಗೆ ಚಾಕು ಹಾಕಿದ್ದೇಕೆ..!?- ಹುಬ್ಬಳ್ಳಿಯಲ್ಲಿ ಕಮೀಷನರ್ ಹೇಳಿದ್ದೇನು…!?

ಹುಬ್ಬಳ್ಳಿ: ವೀರಾಪೂರ ಓಣಿಯಲ್ಲಿ ಅಂಜಲಿ ಅಂಬಿಗೇರ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ವಿಶ್ವನಾಥ, ದಾವಣಗೆರೆಯಲ್ಲಿ ಮಹಿಳೆಯಿಬ್ಬಳಿಗೆ ಚಾಕುಯಿರಿದು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಬೆಂಗಳೂರಿಂದ ಬೆಳಗಾವಿಗೆ ಹೋಗುತ್ತಿದ್ದ ವಿಶ್ವಮಾನವ ರೇಲ್ವೆಯ ಬೋಗಿಯೊಂದರಲ್ಲಿ ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ಲಕ್ಷ್ಮೀ ತನ್ನ ಕುಟುಂಬದೊಂದಿಗೆ ಇದ್ದರು. ಅವರು ರೇಲ್ವೆಯಲ್ಲಿನ ಶೌಚಾಲಯಕ್ಕೆ ಹೋದಾಗ ಹಿಂದಿದೆ ಹೋದ ವಿಶ್ವನಾಥ ಅಸಭ್ಯವಾಗಿ ವರ್ತಿಸಿದ್ದಾನೆ.
ಅಸಲಿ ಕಹಾನಿಯ ವೀಡಿಯೋ…
ಇದನ್ನ ನೋಡಿದ ಲಕ್ಷ್ಮೀ ಆಕ್ರೋಶಗೊಂಡ ತಕ್ಷಣವೇ ನಟೋರಿಯಸ್ ಕಳ್ಳ ವಿಶ್ವ, ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಮಡದಿ ಬಿದ್ದದ್ದನ್ನ ನೋಡಿದ ಲಕ್ಷ್ಮೀಯ ಪತಿ ಆರೋಪಿಯ ಮೇಲೆರಗಿದ್ದಾನೆ. ಆ ಸಮಯದಲ್ಲಿ ಬಿದ್ದು ವಿಶ್ವನಿಗೂ ಗಾಯವಾಗಿದೆ.
ಈ ವಿಷಯ ತಿಳಿದ ತಕ್ಷಣವೇ ರೇಲ್ವೆ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂತೋಷ ಪಾಟೀಲ ಹಾಗೂ ಎಎಸ್ಐ ನಾಗರಾಜ ಪರಿಶೀಲನೆ ನಡೆಸಿ, ಗಾಯಗೊಂಡ ಇಬ್ವರನ್ನೂ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಈತ ಕೊಲೆಪಾತಕ ಎಂಬುದು ಅಲ್ಲಿಯವರೆಗೆ ಯಾರಿಗೂ ಗೊತ್ತೆ ಇರಲಿಲ್ಲ. ಸುಮಾರು ಹೊತ್ತಿನ ನಂತರ ಎಎಸ್ಐ ನಾಗರಾಜ ಅವರು ಮೊಬೈಲ್ ನೋಡುತ್ತ ಕೂತಾಗ, ಹುಬ್ಬಳ್ಳಿಯ ಅಂಜಲಿ ಕೊಂದ ಕೊಲೆಪಾತಕನ ಪೋಟೋ ಬಂದಿದೆ. ತಕ್ಷಣವೇ ಇನ್ಸಪೆಕ್ಟರ್ ಸಂತೋಷ ಅವರಿಗೆ ವಿಷಯ ತಿಳಿಸಿ, ಆತನನ್ನ ವಶಕ್ಕೆ ಪಡೆದಿದ್ದಾರೆ.
ಈ ಮಾಹಿತಿ ಆಧರಿಸಿ ನಡೆದದ್ದು ಏನು ಎಂಬುದನ್ನು ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರೇ ಹೇಳಿದ್ದಾರೆ ನೋಡಿ…
ಕಮೀಷನರ್ ಅವರಿಗೆ ಆರೋಪಿ ಮತ್ತೋರ್ವ ಮಹಿಳೆಗೆ ಚಾಕು ಹಾಕಿದ್ದನೆಂಬ ಸತ್ಯ ಗೊತ್ತೆಯಿರಲಿಲ್ಲ ಎನ್ನುವುದು ಸೋಜಿಗ ಮೂಡಿಸಿದೆ.