ಖುರ್ಚಿಯಲ್ಲೇ ಕೂಡಿಸಿ ಕೊಲೆ: ಆ ವೃದ್ಧ ಮಾಡಿದ್ದಾದರೂ ಏನು..?
ವಿಜಯಪುರ: ತೋಟದ ಕೆಲಸ ಮಾಡಿಕೊಂಡು ಖುರ್ಚಿಯಲ್ಲಿ ಹಾಯಾಗಿ ಕುಳಿತ ವೃದ್ದನೋರ್ವರನ್ನ ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದ ತೋಟದಲ್ಲಿ ನಡೆದಿದೆ. ಡೋಮನಾಳ ನಿವಾಸಿ ಶಾಂತಪ್ಪ ಈರಪ್ಪ ತೊರವಿ(65) ಕೊಲೆಯಾದ ವ್ಯಕ್ತಿಯಾಗಿದ್ದು, ಮೂವರು ದುಷ್ಕರ್ಮಿಗಳಿಗಳಿಂದ ಕೃತ್ಯವೆಸಗಿ ಪರಾರಿಯಾಗಿದ್ದಾರೆ.
ಹಲವು ವರ್ಷಗಳ ಹಿಂದಿನ ವೈಷ್ಯಮ್ಯದಿಂದ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದ್ದು, ಶಾಂತಪ್ಪ ಕುಳಿತ ಖುರರ್ಚಿ ಕೂಡಾ ಸಂಪೂರ್ಣವಾಗಿ ರಕ್ತಮಯವಾಗಿದೆ.
ಶಾಂತಪ್ಪನ ಜೊತೆ ಮಾತನಾಡುತ್ತ ಆತನನ್ನ ಖುರ್ಚಿಯಲ್ಲಿ ಕೂಡಿಸಿ ಆಮೇಲೆ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದ್ದು, ತೋಟದಲ್ಲಿ ಒಬ್ಬರೇ ಇರುವುದನ್ನ ನೋಡಿಕೊಂಡೇ ಕೊಲೆ ಮಾಡಿದ್ದಾರೆಂದು ಅಂದಾಜಿಸಲಾಗಿದೆ.
ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.