ತಲೆಮೊರಬದಲ್ಲಿ “ಮಲಗಿದ್ದಲ್ಲೆ ಮರ್ಡರ್”- ಕಾಳಿನ ನಿಟ್ಟಿನ ಮಧ್ಯೆ ರಕ್ತಸಿಕ್ತ…

ನವಲಗುಂದ: ತಾಲ್ಲೂಕಿನ ತಲೆಮೊರಬ ಗ್ರಾಮದಲ್ಲಿ ಅಡಿವೆಪ್ಪ ತಡಕೋಡ (57) ಎಂಬ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ವೀಡಿಯೋ…
ಕಾಳು ಶೇಖರಿಸಿಟ್ಟಿದ್ದ ಮನೆಯಲ್ಲಿ ಅಡಿವೆಪ್ಪ ಮಲಗಿಕೊಂಡಿದ್ದ ವೇಳೆ ದುಷ್ಕರ್ಮಿಗಳು ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಘಟನೆ ಜರುಗಿದೆ. ಹತ್ಯೆ ಮಾಡಿದ ಆರೋಪಿಗಳು ಯಾರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ನವಲಗುಂದ ಠಾಣೆ ಪೊಲೀಸರು ಹಾಗೂ ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.