ಸುಳ್ಳದಲ್ಲಿ ಮಾವನನ್ನ ಕೊಚ್ಚಿ ಕೊಂದ ಅಳಿಯಂದಿರು…

*Exclusive*
ಆಸ್ತಿ ವಿಚಾರಕ್ಕೆ ಮಾವನನ್ನೇ ಭೀಕರ ಕೊಲೆ ಮಾಡಿದ ಅಳಿಯಂದಿರು
ಹುಬ್ಬಳ್ಳಿ: ಆಸ್ತಿ ವಿಚಾರಕ್ಕೇ ಅಳಿಯ ಹಾಗೂ ಮಾವನ ನಡುವೆ ಜಗಳ ಆರಂಭವಾಗಿ ಮವನನ್ನೇ ಅಳಿಯ ಭೀಕರವಾಗಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ಈಗಷ್ಟೇ ನಡೆದಿದೆ.
ಸುಳ್ಳ ಗ್ರಾಮದ 56 ವರ್ಷದ ಶಿವಪ್ಪ ಅಡಿವೆಪ್ಪ ಮಳ್ಳೊಳ್ಳಿ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ,ಕಳೆದ ಕೆಲವು ವರ್ಷಗಳಿಂದ ಸುಳ್ಳ ಗ್ರಾಮದಲ್ಲಿನ ಆಸ್ತಿಯ ವಿಚಾರಕ್ಕೇ ಅಳಿಯಂದಿರಾದ ಗುರಪ್ಪ,ಷಣ್ಮುಕಪ್ಪಾ,ಗಂಗಪ್ಪಾ, ಹಾಗೂ ಸಿದ್ರಾಮಪ್ಪರ ನಡುವೆ ಜಗಳ ನಡೆಯುತ್ತಲೇ ಇತ್ತು.
ಆದ್ರೆ ಇದೆ ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ಇಂದು ಗ್ರಾಮದಲ್ಲಿನ ಕಲ್ಮೇಶ್ವರ ದೇವಸ್ಥಾನದ ಮುಂದೆ ಶಿವಪ್ಪ ನ ಅಳಿಯಂದಿರು ಜಗಳ ತೆಗೆದಿದ್ದಾರೆ,ಇನ್ನು ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ಅಳಿಯಂದಿರು ತಾವು ತಂದಿದ್ದ ಮಾರಕಾಸ್ತ್ರಗಳಿಂದ ಶಿವಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಶಿವಪ್ಪ ಸ್ಥಳದಲ್ಲೇ ಮೃತಪಟ್ಟುದ್ದಾನೆ.
ಇತ್ತ ಶಿವಪ್ಪ ಸಾಯುತ್ತಿದ್ದ ಹಾಗೆ ಅಳಿಯಂದಿರು ಅಲ್ಲಿಂದ ಪರಾರಿಯಾಗಿದ್ದಾರೆ,ಸದ್ಯ ಕೊಲೆ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಭೇಟಿಯನ್ನು ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.