ನ್ಯಾಯ ಎಲ್ಲಿದೆ.. ಎಲ್ಲಿದೇಯೋ ನ್ಯಾಯ.. ಬಡವನು ನ್ಯಾಯವೇ ಕೇಳುವುದೇ ಅನ್ಯಾಯ..!!

ಹುಬ್ಬಳ್ಳಿ: ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯನ ಹತ್ಯೆ ಹಾಗೂ ಆತನ ಮಡದಿ ಆತ್ಮಹತ್ಯೆಯ ನಂತರ ಕುಟುಂಬದವರು ‘ನ್ಯಾಯ ಎಲ್ಲಿದೆ’ ಎಂದು ಪ್ರಶ್ನೆ ಕೇಳುತ್ತಿದ್ದು, ಉತ್ತರವೇ ಸಿಗದಾಗಿದೆ.
ಎರಡು ಕಡೆಯವರು ಮಾತಾಡಿದ ವೀಡಿಯೋ ಇಲ್ಲಿದೆ ನೋಡಿ… ಪೂರ್ಣವಾಗಿ ನೋಡಿ.. ಸತ್ಯ-ಮಿಥ್ಯದ ದರ್ಶನವಾಗತ್ತೆ…
ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದ ದೀಪಕ ಪಟದಾರಿ ಪ್ರೀತಿಸಿ ಪುಷ್ಪಾ ಮೇಟಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಹುಡುಗಿ ಮನೆಯವರ ವಿರೋಧದ ನಡುವೆಯೂ ಇಬ್ಬರು ಮಕ್ಕಳನ್ನ ಮಾಡಿಕೊಂಡು ಸುಂದರ ಬದುಕನ್ನ ಸಾಗಿಸುತ್ತಿದ್ದಾಗಲೇ ದೀಪಕನ ಹತ್ಯೆಯಾಗಿತ್ತು. ಇದೀಗ ದೀಪಕನ ಪ್ರೀತಿ ಪುಷ್ಪಾ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಘಟನೆಯ ಬಗ್ಗೆ ಕುಟುಂಬದವರ ಸ್ಥಿತಿ ಹೀನಾಯವಾಗಿದ್ದು, ಸಮಾಜದಲ್ಲಿನ ನಿಜ ಸ್ಥಿತಿಯನ್ನ ತೋರಿಸುತ್ತಿದೆ.