Posts Slider

Karnataka Voice

Latest Kannada News

14ಜನರಿಂದ ತಾಯಿ-ಮಗನ ಕೊಲೆ: ಬೆಚ್ಚಿಬಿದ್ದ ಗ್ರಾಮ

1 min read
Spread the love

ಬಾಗಲಕೋಟೆ: ಆಸ್ತಿ ವಿವಾದದ ಹಿನ್ನೆಲೆ ತಾಯಿ ಹಾಗೂ ಮಗನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಜಂಗವಾಡ ಗ್ರಾಮದ ಬಳಿ ಹೊಲದಲ್ಲಿ ನಡೆದಿದೆ.

ಘಟನೆಯಲ್ಲಿ 36 ವರ್ಷದ ದುರ್ಗಪ್ಪ ಭೀಮಪ್ಪ ಮಾದರ, 56 ವರ್ಷದ ದೇವಕೆವ್ವ ಭೀಮಪ್ಪ‌ ಮಾದರ ಕೊಲೆಯಾಗಿದ್ದಾರೆ. ಕೊಲೆಯಾದವರು ತಾಯಿ, ಮಗನಾಗಿದ್ದು, ಹೊಲದ ವಿಚಾರವಾಗಿ, ಉಮೇಶ್ ಮಾದರ್ ಹಾಗೂ ದುರ್ಗಪ್ಪ ಮಾದರ್ ಕುಟುಂಬದ ಮಧ್ಯೆ ಆಗಾಗ ಕಲಹ ಏರ್ಪಟ್ಟಿತ್ತು.

ಈ ಕಲಹ ಕೋರ್ಟ್ ಮೆಟ್ಟಿಲು ಸಹ ಏರಿ, ಹೊಲ ದುರ್ಗಪ್ಪ ಮಾದರ ಅವರಿಗೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಇದರಿಂದ ಮನುಷ್ಯತ್ವ ಕಳೆದುಕೊಂಡ ಉಮೇಶ್ ಮಾದರ್ ಹಾಗೂ ಸಂಗಡಿಗರು ದುರ್ಗಪ್ಪ ಅವರ ಹೊಲಕ್ಕೆ ನುಗ್ಗಿ ಕೊಡಲಿ ಹಾಗೂ ಮಾರಾಕಾಸ್ತ್ರಗಳಿಂದ ದುರ್ಗಪ್ಪ ಹಾಗೂ ತಾಯಿ ದೇವಕ್ಕೆವ್ವ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೆರೂರು ಪೊಲೀಸರು, ಆರೋಪಿಗಳಾದ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ‌.ಬೈಕ್ ಮೇಲಿಂದ‌ ಬಂದು ಕೊಡಲಿಯಿಂದ ಕೊಚ್ಚಿ ೧೪ ಜನ ದುಷ್ಕರ್ಮಿಗಳು ಸೇರಿ ಕೊಲೆಗೈದ್ದಾರೆಂದು,  ಕೆರೂರು ಪೊಲೀಸ್ ಠಾಣೆಯಲ್ಲಿ 14 ಜನರ ವಿರುದ್ದ ದೂರು ದಾಖಲಾಗಿದೆ. ಆರೋಪಿಗಳಾದ ಶಿವಪ್ಪ ಮಾದರ, ಉಮೇಶ್ ಮಾದರ, ಕಾಮಪ್ಪ‌ ಮಾದರ,ಹನುಮಂತ ಮಾದರ, ಪ್ರಕಾಶ್ ಮಾದರ, ರವಿ ಮಾದರ,ರಮೇಶ್ ಮಾದರ, ಬಸವರಾಜ ಮಾದರ, ಸೇರಿದಂತೆ ಒಂಬತ್ತು‌ ಜನ ಸೇರಿ ಕೊಲೆ ಮಾಡಿದ್ದಾರೆಂಬ ಮಾಹಿತಿ ಇದ್ದು, ಉಳಿದ ಆರೋಪಿಗಳ ಬಗ್ಗೆ ಪೊಲೀಸರು ಬಲೆ ಬೀಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed