ಅಂದರ್-ಬಾಹರ್: ಗ್ಯಾಂಗ್ ವಾರ್ ಗೆ ಬಿತ್ತು ಯುವಕನ ಹೆಣ
ವಿಜಯಪುರ: ಪೊಲೀಸರ್ ಕಣ್ಣಿಗೆ ಕಾಣದೇ ನಡೆಯುತ್ತಿದ್ದ ಅಂದರ್-ಬಾಹರ್ ಗ್ಯಾಂಗ್ ವಾರ್ ಗೆ ಯುವಕನೋರ್ವ ಹತ್ಯೆಯಾದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.
ಅನಿಲ ಇಂಗಳಗಿ ಗ್ರಾಮದ ಹೊರವಲಯದಲ್ಲಿ ಹಲವು ದಿನಗಳಿಂದ ಇಸ್ಪೀಟ್ ಆಡಿಸುತ್ತಿದ್ದ. ಚೆನ್ನಾಗಿಯೇ ಕಮಾಯಿ ಬರುತ್ತಿತ್ತು. ಇದನ್ನ ಸಹಿಸದೇ ಇನ್ನೊಂದು ಗ್ಯಾಂಗ್ ಈತನಿಗೆ ಸ್ಕೇಚ್ ಹಾಕಿ ಇಂದು ಕೊಲೆ ಮಾಡಿದ್ದಾರೆ.
ಅನಿಲ ಇಂಗಳಗಿ ಎಲ್ಲರನ್ನೂ ಬುಟ್ಟಿಯಲ್ಲಿ ಹಾಕಿಕೊಂಡು ಜೂಜಾಟ ಆಡಿಸುತ್ತಿದ್ದನೆಂಬ ಕೊಲೆಗೆಡುಕರು ಈ ಹಿಂದಿನಿಂದಲೂ ಮಾತನಾಡುತ್ತಿದ್ದರಂತೆ. ತಮಗೆ ಹಣ ಗಳಿಸುವ ಮಾರ್ಗವನ್ನ ಈತ ಮುಚ್ಚಿದ್ದಾನೆಂದಕೊಂಡು ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿದ್ದಾರೆ.
ಸಿಂದಗಿ ಪಟ್ಟಣದಲ್ಲಿ ನಿನ್ನೆಯಷ್ಟೇ ಎಟಿಎಂ ಸೆಕ್ಯುರಿಟಿಯ ಕೊಲೆ ಮಾಡಲಾಗಿತ್ತು. ಇಂದು ಮತ್ತೊಂದು ಕೊಲೆ ನಡೆದಿರುವುದು ತಾಲೂಕಿನಲ್ಲಿ ಆತಂಕ ಮನೆ ಮಾಡಿದೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಸಿಂದಗಿ ಠಾಣೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.