ಸಾಧುಗಳಲ್ಲೇ ಕಾದಾಟ: ಓರ್ವ ಸಾಧುವಿನ ಕೊಲೆ: ಪೊಲೀಸ್ ಬಲೆಗೆ ಕೊಲೆಪಾತಕ ಸಾಧು
ವಿಜಯಪುರ: ಮನೆ ಮನೆಗೆ ಹೋಗಿ ಧಾರ್ಮಿಕ ಬೋಧನೆ ಮಾಡುತ್ತಿದ್ದ ಸಾಧುಗಳಿಬ್ಬರು ಗಲಾಟೆ ಮಾಡಿಕೊಂಡು ಓರ್ವನ ಕೊಲೆಯಲ್ಲಿ ಘಟನೆ ಅಂತ್ಯವಾದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಸಂಭವಿಸಿದೆ.
ಅರ್ಜುನ್ ಕುರುಬರ(65) ಎಂಬ ಸಾಧುವಿನ ಹತ್ಯೆಯಾಗಿದ್ದು, ಚಂದ್ರಕಾಂತ ಹಡಪದ ಎಂಬ ಸಾಧುವಿನಿಂದ ಕೊಲೆ ನಡೆದಿದೆ. ಮನೆ ಮನೆ ತಿರುಗಿ ಇಳಿಸಂಜೆ ಗ್ರಾಮದ ಹೊರವಲಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಇಬ್ಬರು ಸಾಧುಗಳಲ್ಲಿ ಜಗಳ ಆರಂಭವಾಗಿದೆ. ಆಗ ಚಂದ್ರಕಾಂತ ಹಡಪದ ಎಂಬ ಸಾಧು ಕುಡುಗೋಲಿನಿಂದ ಕೊಚ್ಚಿ ಅರ್ಜುನ ಕುರುಬರ ಎಂಬ ಸಾಧುವನ್ನ ಕೊಲೆ ಮಾಡಿದ್ದಾನೆ. ನಿಡಗುಂದಿ ಠಾಣೆ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.