ಸಂಬಂಧಿಕರಿಂದಲೇ ದಂಪತಿಗಳ ಮಾರಣಹೋಮ: ಆಸ್ತಿಗಾಗಿ ನಿವೃತ್ತ ನೌಕರನ ಕುಟುಂಬ ಕೊಲೆ
1 min readಬೆಂಗಳೂರು: ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೃದ್ಧ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಸಂಬಂಧಿಕರೇ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ..
ನಿವೃತ್ತ ಸರ್ಕಾರಿ ನೌಕರರಾಗಿದ್ದ ಗೋವಿಂದಪ್ಪ (65) ಹಾಗೂ ಅವರ ಪತ್ನಿ ಶಾಂತಮ್ಮ (55)ಕೊಲೆಯಾದ ದುರ್ದೈವಿಗಳು. ಕೆಲ ವರ್ಷಗಳಿಂದಷ್ಟೆ ನಿವೃತ್ತರಾಗಿದ್ದರು. ಗೋವಿಂದಪ್ಪ ಪತ್ನಿ ಹಾಗೂ ಮಗನ ಜೊತೆ ಜೆ.ಪಿ.ನಗರದ ಆರ್ ಬಿ ಐ ಲೇಔಟ್ ನ ಮನೆಯಲ್ಲಿ ವಾಸವಿದ್ದರು. ಭಾನುವಾರ ಸಂಜೆ ಮಗ ಹೊರಗಡೆ ಹೋಗಿದ್ದ ವೇಳೆಯಲ್ಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ ದಂಪತಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ..
ಆಸ್ತಿ ಹಂಚಿಕೆ ಹಾಗೂ ಹಣಕಾಸು ವ್ಯವಹಾರ ಸಂಬಂಧ ಕುಟುಂಬದಲ್ಲೇ ಮನಸ್ತಾಪ ಇರುವ ಮಾಹಿತಿ ಇದೆ. ಸಂಬಂಧಿಕರೇ ಈ ಕೊಲೆ ಮಾಡಿರುವ ಶಂಕೆ ಇದೆ. ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ಹಲವು ಮಾಹಿತಿಯನ್ನು ಈಗಾಗಲೇ ಕಲೆ ಹಾಕಲಾಗಿದೆ ಎಂದು ಪೊಲೀಸರು ಹೇಳಿದ್ರು.
ನಾಪತ್ತೆಯಾದ ಮಗ: ಘಟನೆ ನಡೆಯುವುದಕ್ಕೂ ಮುನ್ನವೇ ಮಗ ಕೆಲಸ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದಾನೆ. ಆತ ಸದ್ಯ ನಾಪತ್ತೆಯಾಗಿದ್ದಾನೆ. ಆತನ ಮೇಲೂ ಅನುಮಾನ ಇದೆ ಎಂದು ಕೋಣನಕುಂಟೆ ಪೊಲೀಸರು ಹೇಳಿದ್ದಾರೆ.