ಹುಬ್ಬಳ್ಳಿಯಲ್ಲಿ ಬೆನ್ನು ಮೂಳೆ ಮುರಿದು-ತೊಡೆವರೆಗೂ ದೇಹ ಛಿದ್ರ ಮಾಡಿ ಹತ್ಯೆ

ಬೆನ್ನು ಮೂಳೆಯನ್ನ ಮುರಿದು ತೊಡೆಯಿಂದ ಸಂಪೂರ್ಣವಾಗಿ ಮೇಲ್ಭಾಗದವರೆಗೂ ಚಾಕುವಿನಿಂದ ಹರಿದು ವಿಕೃತಿ ಮೆರೆದಿರುವ ಕಿರಾತಕರು
ಹುಬ್ಬಳ್ಳಿ: ಯುವಕನನ್ನ ಬೈಪಾಸ್ ಬಳಿ ಕೊಲೆ ಮಾಡಿ, ತಾವೇ ಕಿಮ್ಸ್ ಬಳಿ ತಂದು ಬಿಟ್ಟು ಹೋಗಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಷೀಟರನೇ ಪ್ರಮುಖ ಆರೋಪಿಯಂದು ಹೇಳಲಾಗಿದ್ದು, ಪೊಲೀಸರಿಗೆ ಮತ್ತೆ ಚಳ್ಳೆಹಣ್ಣು ತಿನಿಸಲು ಕೊಲೆಪಾತಕ ಮುಂದಾಗಿದ್ದಾನೆ.
ಹಳೇಹುಬ್ಬಳ್ಳಿಯ ಶಾರುಖ ಸೌದಾಗರ ಎಂಬ 25 ವರ್ಷದ ಯುವಕನದ್ದೇ ಕೊಲೆ ನಡೆದಿದ್ದು, ಹುಬ್ಬಳ್ಳಿ-ಧಾರವಾಡ ಬೈಪಾಸ್ ಬಳಿ ಕೊಲೆಯನ್ನ ಮಾಡಿರುವ ದುಷ್ಮರ್ಮಿಗಳು ಕಿಮ್ಸಗೆ ವಾಹನದಲ್ಲಿ ತಂದು ಬಿಟ್ಟು ಪರಾರಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಲೀಂ ಬಳ್ಳಾರಿ ಮತ್ತು ಸಂಗಡಿಗರೇ ಈ ಕೊಲೆಯನ್ನ ಮಾಡಿದ್ದೆಂದು ಹೇಳಲಾಗುತ್ತಿದ್ದು, ಕೊಲೆಗೆ ನಿಖರವಾದ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಆದರೆ, ಸಲೀಂ ಬಳ್ಳಾರಿ ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಶಾರುಖ ಸೌದಾಗರನ ಶವವನ್ನ ಕಿಮ್ಸನ ಶವಾಗಾರದಲ್ಲಿಡಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಹೊಟೇಲ್ ಬಳಿ ಜಗಳವಾಡುತ್ತಿದ್ದ ಸಮಯದಲ್ಲಿ ಸಲೀಂ ಬಳ್ಳಾರಿಯನ್ನ ಕಸಬಾಪೇಟೆ ಠಾಣೆ ಪೊಲೀಸರು ಬಂಧನ ಮಾಡಿ, ಜೈಲಿಗಟ್ಟಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿರುವ ಸಲೀಂ ಬಳ್ಳಾರಿ ಮತ್ತದೇ ಹಳೇಯ ಛಾಳಿಗೆ ಬಿದ್ದಿರುವುದು ಬೆಳಕಿಗೆ ಬಂದಿದೆ.
ಸಲೀಂ ಬಳ್ಳಾರಿ ನಟೋರಿಯಸ್ ರೌಡಿ ಷೀಟರ್ ಆಗಿದ್ದು, ಕಲಬುರಗಿಯಲ್ಲೂ ಹಲವು ಕ್ರಿಮಿನಲ್ ಕೇಸ್ ಗಳು ಈತನ ಮೇಲೆ ಇವೆ.