Exclusive Photos- ಗಂಡನಿಗೆ ಊಟ ಬಡಿಸಿದಳು.. ಆತ ಸೆರೆ ಕುಡಿಸಿದ.. ಇನ್ನೋರ್ವ ಹತ್ಯೆ ಮಾಡಿದಾ..!

ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದ ಕೊಲೆ ಪ್ರಕರಣದಲ್ಲಿ ಹಲವು ಆಯಾಮಗಳಿರುವುದು ಒಂದಾದಾಗಿ ಹೊರ ಬೀಳುತ್ತಿವೆ. ಗಂಡನ ಕೊಲೆ ಮಾಡುವ ಮುನ್ನ ಆತನಿಗೆ ಹೆಂಡತಿಯೇ ಕೈಯಾರೆ ಊಟ ಬಡಿಸಿದ್ದಳಂತೆ. ಪ್ರಿಯಕರ ಮದ್ಯದ ಬಾಟಲಿನೊಂದಿಗೆ ನಿಂತಿದ್ದನಂತೆ. ಕೊಲೆ ನಡೆದದ್ದು ಹೇಗೆ ಎಂಬುದರ ಮಾಹಿತಿಯಿಲ್ಲದೆ ನೋಡಿ..
ನರೇಂದ್ರ ಗ್ರಾಮದ ಪೀರಸಾಬ ನದಾಫ ಎಂಬ ವ್ಯಕ್ತಿಗೆ ಹೆಂಡತಿ ಪರವೀನಭಾನು, ಈಕೆಯ ಪ್ರಿಯಕರ ಸೋಮಯ್ಯ ಪೂಜಾರ ಮತ್ತು ಮಲ್ಲಿಕಾರ್ಜುನ ಅಗಸರ ಹೇಗೆ ಹೊಡೆದು ಹಾಕಿದ್ದಾರೆ ನೋಡಿ.
ಹಲವು ವರ್ಷಗಳಿಂದಲೇ ಪೀರಸಾಬನನ್ನ ಮುಗಿಸಬೇಕೆಂದುಕೊಂಡಿದ್ದ ಸೋಮಯ್ಯ ಮತ್ತು ಪರವೀನಭಾನು, ಗಂಡನನ್ನ ಊಟಕ್ಕೋಗಿ ಬರೋಣವೆಂದು ಕರೆದುಕೊಂಡು ಹೋಗಿದ್ದಾರೆ. ತನ್ನ ಕೊಲೆ ನಡೆಯಬಹುದೆಂಬ ಸಣ್ಣ ಕಲ್ಪನೆಯೂ ಇಲ್ಲದೇ ಹೋದ, ಪೀರಸಾಬ ಹೆಂಡತಿ ಕೊಟ್ಟ ಊಟವನ್ನೂ, ಆಕೆಯ ಗೆಳೆಯ ಕೊಟ್ಟ ಮಧ್ಯವನ್ನ ಕುಡಿದಿದ್ದಾನೆ. ಯಾವಾಗ ಕುಡಿದು ನಸೆ ಆಗಿದೇಯೋ ಈ ಮೂವರು ಕೂಡಿ, ಪೀರಸಾಬನನ್ನ ಕೊಲೆ ಮಾಡಿ, ಹೊಳೆಯಲ್ಲಿ ಒಗೆದು ಬಂದು ಬಿಟ್ಟಿದ್ದಾರೆ.
ಧಾರವಾಡ ಗ್ರಾಮೀಣ ಠಾಣೆ ಪಿಎಸೈ ಮಹೇಂದ್ರಕುಮಾರ, ಸ್ವಲ್ಪ ನಿಷ್ಕಾಳಜಿ ವಹಿಸಿದ್ದರೂ ಈ ಕೊಲೆ ಪ್ರಕರಣ ಪತ್ತೆಯಾಗುತ್ತಿರಲೇ ಇಲ್ಲ. ಜಾಣಾಕ್ಷತನದಿಂದ ಹೊರ ಬಂದಿದೆ ಪ್ರಕರಣ.