“ನರಹಂತಕ”ನ ರಹಸ್ಯ ಬಿಚ್ಚಿಟ್ಟ ಪೊಲೀಸ್ ಕಮೀಷನರ್ ಲಾಬುರಾಮ್- ಮತ್ತಷ್ಟು ಕೊಲೆಗಳ ಬಗ್ಗೆ ತನಿಖೆ….!
1 min readಹುಬ್ಬಳ್ಳಿ: ನಗರದ ಶ್ರೀ ಕೃಷ್ಣಭವನದ ಹೊಟೇಲ್ ಮುಂಭಾಗದಲ್ಲಿ ಮಹಿಳೆಯ ಹತ್ಯೆ ಮಾಡಿದವನೇ, ಎರಡು ವರ್ಷಗಳ ಹಿಂದೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಕೊಲೆ ಮಾಡಿದ್ದನೆಂದು ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಹೇಳಿದರು.
ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಹಣಕ್ಕಾಗಿ ಧಾರವಾಡ ಮೂಲದವ ಕೊಲೆ ಮಾಡುತ್ತಿದ್ದ. ಈ ಹಿಂದೆಯೂ ಆತ ಮಾಡಿದ ಕೊಲೆಯೊಂದನ್ನ ಒಪ್ಪಿಕೊಂಡಿದ್ದು, ಮತ್ತಷ್ಟು ವಿವರಗಳ ಬಗ್ಗೆ ವಿಚಾರಣೆಯನ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಸಂಪೂರ್ಣ ಹೇಳಿಕೆ ಇಲ್ಲಿದೆ ನೋಡಿ..
ನರಹಂತಕ ಚಿಂದಿ ಆಯುವ ರೀತಿಯಲ್ಲಿಯೇ ತಿರುಗಾಡಿ, ಭಿಕ್ಷೆ ಬೇಡಿ ಹಣ ಸಂಗ್ರಹ ಮಾಡುತ್ತಿದ್ದವರನ್ನ ಕಲ್ಲಿನಿಂದ ಹೊಡೆದು ಕೊಲೆ ಮಾಡಿ, ಅವರ ಬಳಿಯಿದ್ದ ಹಣವನ್ನ ತೆಗೆದುಕೊಂಡು ಪರಾರಿಯಾಗುತ್ತಿದ್ದನೆಂದು ಹೇಳಿದರು.
ಆರೋಪಿಯ ಹೆಸರನ್ನ ಹೇಳದ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಮತ್ತಷ್ಟು ಕೊಲೆಗಳ ಬಗ್ಗೆ ತನಿಖೆಯನ್ನ ಮುಂದುವರೆಸಿದ್ದಾಗಿ ಹೇಳಿದರು.