Posts Slider

Karnataka Voice

Latest Kannada News

ಪ್ರಿಯಕರನ ಕತ್ತು ಸೀಳಿ ಕೊಲೆ ಮಾಡಿದ “ವಾರದ ಗೆಳತಿ ಮಾಯಾ”…!

1 min read
Spread the love

ಬಳ್ಳಾರಿ: ಒಂದು ವಾರದ ಹಿಂದಷ್ಟೇ ಮನೆ ಮಾಡಿಕೊಂಡಿದ್ದ ಜೋಡಿಗಳ ಪೈಕಿ ಯುವಕನೋರ್ವ ಶವ ಕತ್ತಿಲ್ಲದೇ ಸಿಕ್ಕಿರುವ ಭಯಾನಕ ಘಟನೆಯೊಂದು ನಾಲ್ಕು ದಿನಗಳ ನಂತರ ಬೆಳಕಿಗೆ ಬಂದ ಘಟನೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲದಲ್ಲಿ ಸಂಭವಿಸಿದೆ.

ಜಿಲ್ಲೆಯ ವಿವಿಧ ಹೊಟೇಲಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೋಡಿಗಳು ವಾರದ ಹಿಂದ ತೋರಣಗಲ್ಲಿನಲ್ಲಿ ಮನೆ ಮಾಡಿಕೊಂಡಿದ್ದರು. ಜೊತೆಗೆ ಮಲಗಿದ್ದಾಗ, ಪ್ರಿಯಕರನ ಕೈಗೆ ಹಗ್ಗವನ್ನ ಕಟ್ಟಿ, ಆತನಿಗೆ ಇಂಜೆಕ್ಷನ್ ಕೊಟ್ಟು, ನಂತರ ಆತನ ಕತ್ತನ್ನ ಸೀಳಿ, ತಲೆಯನ್ನ ತುಂಡು ತುಂಡು ಮಾಡಿ ಅಮಾನುಷ ಕೌರ್ಯವನ್ನ ಮೆರೆಯಲಾಗಿದೆ.

ಹತ್ಯೆಯಾದ ವ್ಯಕ್ತಿಯನ್ನ ತೋರಣಗಲ್ ನಿವಾಸಿ ಆಶೀಶ ಡೇ ಎಂದು ಗುರುತಿಸಲಾಗಿದ್ದು, ರಾಕ್ಷಸ ರೀತಿಯಲ್ಲಿ ಹತ್ಯೆ ಮಾಡಿದ ಮಾಯಾ ಎಂಬಾಕೆ ಪರಾರಿಯಾಗಿದ್ದಾಳೆ. ಈಕೆ ಮೂಲತಃ ಪಶ್ಚಿಮ ಬಂಗಾಳದವಳೆಂದು ಹೇಳಲಾಗಿದೆ.

ಘಟನೆ ನಡೆದು ನಾಲ್ಕು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯ ದೇಹವೂ ಕೊಳೆಯುವ ಹಂತಕ್ಕೆ ಬಂದಿದ್ದು, ಕೊಲೆಗೆ ಇನ್ನಿಬ್ಬರು ಸಹಕಾರ ನೀಡಿದ್ದಾರೆಂದು ಹೇಳಲಾಗಿದೆ. ತೋರಣಗಲ್ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *