ಅನ್ಯ ಕೋಮಿನ ಯುವತಿ ಪ್ರೀತಿಸಿ ಮುಸ್ಲಿಂ ಯುವಕನ ಬರ್ಭರ ಹತ್ಯೆ

ರಾಯಚೂರು: ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದ ಕಾರಣಕ್ಕೆ ಯುವತಿಯ ತಂದೆಯಿಂದಲೇ ಯುವಕನ ಕೊಲೆಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗುರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದೆ.
ಮೆಹಬೂಬ್ ಕೊಲೆಯಾದ ಯುವಕನಾಗಿದ್ದು, ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದ್ದರಿಂದ ಯುವತಿಯ ತಂದೆ ಹನುಮಂತ ಕೊಲೆ ಮಾಡಿದ್ದಾನೆ. ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಯುವತಿಯ ತಂದೆಯನ್ನ ಮುದಗಲ್ ಠಾಣೆ ಪೋಲಿಸರು ತನಿಖೆಯನ್ನ ಆರಂಭಿಸಿದ್ದಾರೆ.