ಕುಂದಗೋಳ: ಕುಡಗೋಲಿಂದ “ಅತ್ತಿಗೆ ಕತ್ತು ಕಟ್” ಮಾಡಿದ ಮೈದುನ…

ಅತ್ತಿಗೆಯನ್ನೇ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಮೈದುನ
ಕುಂದಗೋಳ : ಮನೆಯಲ್ಲಿನ ಆಂತರಿಕ ಕಲಹ ಅತಿರೇಕಕ್ಕೆ ಹೋಗಿ ಮೈದುನನ್ನೇ ತನ್ನ ಅತ್ತಿಗೆಯನ್ನು ಕುಡಗೋಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ನಡೆದಿದೆ.

ಯರಿನಾರಾಯಣಪುರ ಗ್ರಾಮದ ಸುನಂದಾ ಮೆಣಸಿನಕಾಯಿ ಎಂಬ ಮಹಿಳೆಯೇ ಕೊಲೆಯಾದ ಮಹಿಳೆಯಾಗಿದ್ದು ಆಕೆಯ ಮೈದುನ ಮಂಜುನಾಥ ಎಂಬಾತ ಕುಡಗೋಲಿನಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಕುಂದಗೋಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.