ಕಲಘಟಗಿಯ ಕುರುವಿನಕೊಪ್ಪದಲ್ಲಿ ‘ಕಲ್ಲಿನಿಂದ ಹೊಡೆದು’ ಭೀಕರ ಹತ್ಯೆ…!

ಕಲಘಟಗಿ: ಪರಿಚಯಸ್ಥ ಹುಡುಗಿಯೊಂದಿಗೆ ಸಲುಗೆಯಿಂದ ಇದ್ದಿದ್ದನ್ನ ನೆಪ ಮಾಡಿಕೊಂಡು ಯುವಕನನ್ನ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ಹುಣಚ್ಯಾಳ ಪ್ಲಾಟಿನ ಕೋರಿಯವರ ಓಣಿಯಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನ ಮಂಜುನಾಥ ಶಂಕ್ರಪ್ಪ ಮರೆಪ್ಪನವರ ಎಂದು ಗುರುತಿಸಲಾಗಿದ್ದು, ಅದೇ ಗ್ರಾಮದ ಬಸವರಾಜ ಲಕ್ಷ್ಮಣ ಕುರಡಿಕೇರಿ ಅಲಿಯಾಸ್ ಸಿಂದೂರ ಎಂಬಾತನೇ ಕೊಲೆ ಮಾಡಿದ್ದಾನೆ.

ಮಂಜುನಾಥ ಅದೇ ಗ್ರಾಮದ ಯುವತಿಯೊಂದಿಗೆ ಸಲುಗೆಯಿಂದ ಇದ್ದ. ಇದೇ ಕಾರಣಕ್ಕೆ ಹಿರಿಯರ ಸಮ್ಮುಖದಲ್ಲಿ ಮಾತುಕತೆಯೂ ಆಗಿತ್ತು. ಆದರೆ, ಅದನ್ನೇ ಮನಸ್ಸಲ್ಲಿಟ್ಟುಕೊಂಡು ಬಸವರಾಜ, ಇಂದು ಮಚ್ಚಿನಿಂದ ಹೊಡೆಯಲು ಬಂದಿದ್ದಾನೆ. ಮಚ್ಚು ಮುರಿದ ಪರಿಣಾಮ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಲಾಗಿದೆ.