ಸ್ನೇಹಿತರಿಂದಲೇ ರೌಡಿಶೀಟರ್ ಕೊಲೆ: ಊಟಕ್ಕೆ ಕರೆದುಕೊಂಡು ಹೋಗಿ ಕೊಂದ ಗೆಳೆಯರು ಅಂದರ್
ಕಲಬುರಗಿ: ಪ್ರತಿದಿನ ಕೂಡಿ ಅಲೆದಾಡುತ್ತಿದ್ದ ಗೆಳೆಯರು ಊಟಕ್ಕೆ ಕರೆದುಕೊಂಡು ಹೋಗಿ ಬರ್ಭರವಾಗಿ ಕೊಲೆ ಮಾಡಿರುವ ಘಟನೆ ನಗರದ ರಿಂಗ್ ರಸ್ತೆಯ ಪೀರ್ ಬೆಂಗಾಲಿ ಮೈದಾನದಲ್ಲಿ ನಡೆದಿದ್ದು, ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬುಲಂದ್ ಪರ್ವೇಜ್ ಕಾಲೋನಿಯ ಯುವಕ ಹಸನಅಲಿ ಅಲಿಯಾಸ್ ಚಿಂದಿ ಹಸನ್ (24) ಕೊಲೆಯಾದ ರೌಡಿಶೀಟರ್ ಆಗಿದ್ದು, ಕೊಲೆ, ದರೋಡೆ, ಸುಲಿಗೆ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದಿದ್ದ. ಕಲಬುರಗಿ ಗ್ರಾಮೀಣ ಪೋಲಿಸ್ ಠಾಣೆಯ ಪೊಲೀಸರು ತಕ್ಷಣವೇ ಜಾಗೃತರಾಗಿ ಆರೋಪಿಗಳಾದ ಮಸ್ತಾನಪಾಶಾ, ಸೋಯಲ್, ಸಮೀರ, ಮೊಸೀನ್ ಹಾಗೂ ಸಾಧಿಕ ಎಂಬಾತರನ್ನ ಪತ್ತೆ ಮಾಡಿದ್ದು, ಕೊಲೆಗೆ ವಯಕ್ತಿಕ ದ್ವೇಷ ಕಾರಣವೆನ್ನಲಾಗಿದೆ.
ಪ್ರಮುಖ ರಸ್ತೆಯಲ್ಲೇ ಕೊಲೆ ನಡೆದಿದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಮತ್ತಷ್ಟು ಜಾಗೃತಿವಹಿಸಬೇಕಿದೆ.