ಎರಡು ಹೆಣ್ಣು ಜೀವ.. 12ಕೈ.. 40 ಗ್ರಾಂ ಚಿನ್ನ: ದೃಶ್ಯಂ ಸಿನೇಮಾ ‘ಸ್ಟೈಲ್’ನಲ್ಲಿ ನಡೆದಿತ್ತು ಸಾಕ್ಷ್ಯ ನಾಶ…

ಧಾರವಾಡ: ನಲ್ವತ್ತು ಗ್ರಾಂ ಚಿನ್ನದ ಆಸೆಗಾಗಿ ಆರು ಜನರ ಪಟಾಲಂವೊಂದು ಇಬ್ಬರು ಮಹಿಳೆಯರನ್ನ ಬರ್ಭರವಾಗಿ ಹತ್ಯೆ ಮಾಡಿ, ಸುಟ್ಟು ಸಾಕ್ಷ್ಯ ಮಾಡುವ ಜೊತೆಗೆ ದೃಶ್ಯಂ ಸಿನೇಮಾದ ರೀತಿಯಲ್ಲಿಯೇ ಪ್ರತಿಯೊಂದು ಸಾಕ್ಷಿಗಳನ್ನ ನಾಶ ಮಾಡುವ ಪ್ರಯತ್ನ ಬೆಳಕಿಗೆ ಬಂದಿದೆ.
ನವನಗರ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಈಶ್ವರನಗರದ ಇಂದ್ರಾಬಾಯಿ ಪವಾರ ಮತ್ತು ಮಹಾದೇವಿ ನೀಲಮ್ಮನವರ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಮುಚ್ಚಿ ಹಾಕುವ ಪ್ರತಿಯೊಂದು ಹುನ್ನಾರವನ್ನ ಕಿರಾತಕರು ಮಾಡಿ ಮುಗಿಸಿದ್ದಾರೆ.
ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಘಟನೆಗಳು ಇಲಾಖೆಯ ತಲೆ ನೋವಿಗೆ ಕಾರಣವಾಗಿತ್ತು. ಈ ಪ್ರಕರಣ ಭೇದಿಸಲು ಜಾಣಾಕ್ಷತನದಿಂದ ಕರ್ತವ್ಯ ನಿರ್ವಹಣೆ ಮಾಡಿದ್ದನ್ನ ಇಲ್ಲಿ ಸ್ಮರಿಸಬಹುದು.
