Posts Slider

Karnataka Voice

Latest Kannada News

ರುಂಡ-ಮುಂಡ-ಕೈ-ಕಾಲು ಸಿಕ್ಕ ಪ್ರಕರಣದಲ್ಲಿ- ಬಾಟಮ್ ಲೈನ್ ಸಾಕ್ಷ್ಯ…!

1 min read
Spread the love

ಹುಬ್ಬಳ್ಳಿ: ತೀವ್ರ ಥರದ ಕುತೂಹಲಕ್ಕೂ ಅಚ್ಚರಿಗೂ ಕಾರಣವಾಗಿರುವ ಹುಬ್ಬಳ್ಳಿಯ ಸುತ್ತಮುತ್ತ ಸಿಕ್ಕ, ದೇಹದ ಮೇಲಿನ ಬಟ್ಟೆಯೊಂದು ಸಾಕ್ಷ್ಯ ನುಡಿಯುತ್ತಿದ್ದು, ಈ ಬಗ್ಗೆ ಚಾಣಾಕ್ಷರು ಮಾಹಿತಿಯನ್ನ ಪೊಲೀಸರಿಗೆ ನೀಡಬಹುದಾಗಿದೆ.

ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಹೊರವಲಯದಲ್ಲಿ ಯುವಕನ ರುಂಡವೊಂದು ಸಿಕ್ಕ ತಕ್ಷಣವೇ, ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತಲೆಕೆಡಿಸಿಕೊಂಡು ಕೂತಾಗಲೇ, ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಡವೂ ಮತ್ತೂ ಮರುದಿನ ಎರಡು ಕೈ-ಒಂದು ಕಾಲು ಸಿಕ್ಕಿದೆ.

ಇಷ್ಟೇಲ್ಲವೂ ಸಿಕ್ಕ ಮೇಲೆ ಒಂದು ಕಾಲಿಗಾಗಿ ಹುಡುಕಾಟವನ್ನ ಪೊಲೀಸರು ಮುಂದುವರೆಸಿದ್ದಾರೆ. ಆದರೆ, ದೇಹದಲ್ಲಿ ಸಿಕ್ಕ ಶರ್ಟಿನ್ ಹೆಸರೊಂದು ಸಾಕ್ಷ್ಯವನ್ನ ನುಡಿಯುತ್ತಿದೆ, ಅದೇ ಬಾಟಮ್ ಲೈನ್ ಹೆಸರು.

ಈ ಕಂಪನಿಯ ಹೆಸರಿನ ಶರ್ಟ್ ಎಲ್ಲಿ ಸಿಗುತ್ತವೆ. ಅವುಗಳನ್ನ ಹುಬ್ಬಳ್ಳಿ-ಧಾರವಾಡದಲ್ಲಿ ಎಲ್ಲಿ ಮಾರಾಟ ಮಾಡುತ್ತಾರೆಂಬ ಸಣ್ಣ ಸುಳಿವು ಸಿಕ್ಕರೂ ಪೊಲೀಸರಿಗೆ ಮಾಹಿತಿ ನೀಡಿ. ಇಡೀ ಧಾರವಾಡ ಜಿಲ್ಲೆಗೆ ಕಪ್ಪು ಚುಕ್ಕೆಯಂತಾದ ಪ್ರಕರಣವೊಂದು ಪತ್ತೆಯಾಗಲು ಸಹಕಾರ ನೀಡಿ.


Spread the love

Leave a Reply

Your email address will not be published. Required fields are marked *