ಎಟಿಎಂ ಲೂಟಿಗೆ ಯತ್ನ: ಐಸಿಐಸಿಐ ಬ್ಯಾಂಕ್ ಸೆಕ್ಯುರಿಟಿ ಹತ್ಯೆ
ವಿಜಯಪುರ: ಹಣ ದೋಚಲು ಎಟಿಎಂಗೆ ಬಂದಿದ್ದ ಖದೀಮರು ATM ಸೆಕ್ಯೂರಿಟಿಯನ್ನ ಹತ್ಯೆಗೈದು ಲೂಟಿಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ICICI ಬ್ಯಾಂಕ್ ನ ATMನಲ್ಲಿ ನಡೆದಿದೆ.
ಐಸಿಐಸಿಐ ಬ್ಯಾಂಕ್ ATM ಸೆಕ್ಯೂರಿಟಿ ಹಾಗೂ ಜಿಲ್ಲೆಯ ಮದಬಾವಿ ತಾಂಡಾ ನಿವಾಸಿ ರಾಹುಲ ರಾಠೋಡ (25) ಹತ್ಯೆಯಾಗಿರುವ ಸೆಕ್ಯೂರಿಟಿ ಗಾರ್ಡ್. ಮರ್ಡರ್ ಮಾಡಿ ATMನಲ್ಲಿರುವ ಹಣದೋಚಲು ಖದೀಮರು ಯತ್ನಿಸಿದ್ದಾರೆ. ಆದ್ರೇ, ATM ಸೈರನ್ ಶಬ್ದಕ್ಕೆ ಸ್ಥಳದಿಂದ ಕಳ್ಳರು ಕಾಲ್ಕಿತಿದ್ದಾರೆ.
ಸೆಕ್ಯುರಿಟಿ ಗಾರ್ಡ್ ರಾಹುಲ ಖದೀಮರನ್ನ ತಡೆಯಲು ಮುಂದಾದಾಗ ಹೊಡೆದು ಉರುಳಿಸಿದ್ದಾರೆ. ಅಲ್ಲಿಯೂ ನಿರಂತರ ಪ್ರಯತ್ನ ಮುಂದುವರೆಸಿದಾಗ ರಾಹುಲನನ್ನ ಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ. ಸಿಂದಗಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಆರೋಪಿಗಳ ಬಗ್ಗೆ ಸುಳಿವು ಹುಡುಕುತ್ತಿದ್ದಾರೆ.