Posts Slider

Karnataka Voice

Latest Kannada News

ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ‘ಸರ್ಜಿಕಲ್ ಸ್ಟ್ರೈಕ್’- ಹತ್ಯೆಗೆ ಸಂಚು ಮಾಡಿದ್ದ ಮೂವರು ಅಂದರ್…!!!

Spread the love

ಪಾಪಿಗಳ ಪಾಲಿಗೆ “ರುದ್ರಾವತಾರ” ತಾಳಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸರು; ಜಾತಿ ಕ್ರಿಮಿಗಳ ಅಟ್ಟಹಾಸಕ್ಕೆ ಖಾಕಿ ಬ್ರೇಕ್..

ಹುಬ್ಬಳ್ಳಿ: ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಕರಳು ಹಿಂಡುವ ಮರ್ಯಾದಾ ಹತ್ಯೆ ಪ್ರಕರಣದಲ್ಲಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತೋರಿದ “ರೌದ್ರಾವತಾರ” ಮತ್ತು “ಸಮಯಪ್ರಜ್ಞೆ” ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಮಗಳನ್ನೇ ಕೊಂದ ಕಟುಕರಿಗೆ ಕಾನೂನಿನ ಪವರೇನು ಎಂಬುದನ್ನು ಕೇವಲ 24 ಗಂಟೆಯಲ್ಲಿ ಪೊಲೀಸರು ತೋರಿಸಿಕೊಟ್ಟಿದ್ದಾರೆ.


ಖಾಕಿ ಪಡೆಯ ‘ಸರ್ಜಿಕಲ್ ಸ್ಟ್ರೈಕ್’ – ಮುರುಗೇಶ್ ಚೆನ್ನಣ್ಣವರ ಅಮೋಘ ಸಾಹಸ: ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕಣಕ್ಕಿಳಿದ ಇನ್ಸಪೆಕ್ಟರ್ ಮುರುಗೇಶ್ ಚೆನ್ನಣ್ಣವರ ಮತ್ತು ಅವರ ತಂಡ, ಯಾವುದೇ ಪ್ರಭಾವಕ್ಕೂ ಬಗ್ಗದೆ ಸಿಂಹದಂತೆ ಗರ್ಜಿಸಿದೆ.

ಚಾಣಾಕ್ಷ ತನಿಖೆ: ತಪ್ಪಿಸಿಕೊಳ್ಳಲು ಸಂಚು ರೂಪಿಸಿದ್ದ ಆರೋಪಿಗಳ ಹೆಜ್ಜೆ ಗುರುತುಗಳನ್ನು ಹಿಂಬಾಲಿಸಿದ ಪೊಲೀಸರು,  ಆರೋಪಿಗಳ ಹೆಡಮುರಿ ಕಟ್ಟಿದ್ದಾರೆ.

ಕಾನೂನಿನ ಸಿಂಹಸ್ವಪ್ನ: ಪ್ರತಿಷ್ಠೆಯ ಅಮಲಿನಲ್ಲಿ ಮೆರೆಯುತ್ತಿದ್ದ ಪಾಟೀಲ್ ಕುಟುಂಬದ ಸದಸ್ಯರನ್ನು ಒಂದೇ ದಿನದಲ್ಲಿ ಜೈಲು ಕಂಬಿ ಹಿಂದೆ ತಳ್ಳುವ ಮೂಲಕ, ಪೊಲೀಸರು ಸಾರ್ವಜನಿಕರಲ್ಲಿ ಕಾನೂನಿನ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದ್ದಾರೆ.

ಜಾತಿ ಕ್ರಿಮಿಗಳ ಬೆನ್ನತ್ತಿದ ಧೀರರು: ಸಮಾಜದ ಸ್ವಾಸ್ಥ್ಯ ಕೆಡಿಸುವ ಜಾತಿ ಕ್ರಿಮಿಗಳಿಗೆ ಪೊಲೀಸರು ಮೃತ್ಯುಪ್ರಾಯರಾಗಿ ಕಂಡಿದ್ದಾರೆ.
​ಆರು ಮಂದಿಯ ಬಂಧನ: ಪಕ್ಕೀರಗೌಡ, ಬಸನಗೌಡ ಮತ್ತು ಗುರಸಿದ್ದಗೌಡ ಸೇರಿದಂತೆ ಪ್ರಮುಖ ಆರೋಪಿಗಳನ್ನ ಮಿಂಚಿನ ಕಾರ್ಯಾಚರಣೆಯ ಮೂಲಕ ಬಂಧಿಸಿರುವ ಪೊಲೀಸರು, ಕೊಲೆಗಡುಕರಿಗೆ ಕಾನೂನಿನ ನಡುಕ ಹುಟ್ಟಿಸಿದ್ದಾರೆ.

ರಾಜಿ ಇಲ್ಲದ ಹೋರಾಟ: ಕರಳು ಕುಡಿಯನ್ನೇ ಬಲಿಕೊಟ್ಟ ಪಾಪಿಗಳ ವಿರುದ್ಧ ಇನ್ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣವರ ತಂಡ ತೋರಿದ ದಕ್ಷತೆ ಮತ್ತು ಬದ್ಧತೆ ನಿಜಕ್ಕೂ ಶ್ಲಾಘನೀಯ.


Spread the love

Leave a Reply

Your email address will not be published. Required fields are marked *