ಹುಬ್ಬಳ್ಳಿ-ಧಾರವಾಡದಲ್ಲಿ “ಆತ” ಕೊಲೆ ಮಾಡಿದ್ದೂ.. 1..2.. 3..4..5.. ಮುಂದುವರೆಯುತ್ತಿದೆ….
1 min readಹುಬ್ಬಳ್ಳಿ: ಅವಳಿನಗರವನ್ನೇ ಬೆಚ್ಚಿ ಬೀಳಿಸುವ ಕಿರಾತಕ ಮನಸ್ಥಿತಿಯ ವ್ಯಕ್ತಿಯನ್ನ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಬಂಧಿಸಿದ್ದು, ಹಲವು ಕೊಲೆ ಪ್ರಕರಣಗಳು ಹೊರ ಬರುತ್ತಿವೆ.
ಹುಬ್ಬಳ್ಳಿಯ ಶ್ರೀ ಕೃಷ್ಣಭವನದ ಬಳಿ ಸುಮಾ ಎಂಬ ಮಹಿಳೆಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ರಫೀಕ ಎಂಬಾತನ, ಕ್ರೈಂ ಪದರುಗಳು ಒಂದೊಂದಾಗಿ ಹೊರ ಬೀಳುತ್ತಿವೆ.
ಈತ ಮೂಲತಃ ಧಾರವಾಡದ ಮಣಕಿಲ್ಲಾದವನು ಎಂದು ಹೇಳಿಕೊಳ್ಳುತ್ತಾನಾದರೂ, ನಿಖರವಾಗಿ ತಿಳಿದು ಬರುತ್ತಿಲ್ಲ. ಆದರೆ, ಮೂರು ದಿನ ಧಾರವಾಡದಲ್ಲಿದ್ದರೇ, ಇನ್ನುಳಿದ ಮೂರು ದಿನ ಹುಬ್ಬಳ್ಳಿಯಲ್ಲಿರುತ್ತಾನಂತೆ.
ಈ ಸಮಯದಲ್ಲಿ ಭಿಕ್ಷೆ ಬೇಡುವವರನ್ನ ಕಲ್ಲಿನಿಂದ ಹೊಡೆದು ಕೊಲೆ ಮಾಡಿ, ಅವರ ಬಳಿಯಿದ್ದ ಹಣವನ್ನ ದೋಚಿಕೊಂಡು ಹೋಗಿ, ಕೂಗಳತೆ ದೂರದಲ್ಲೇ ಭಿಕ್ಷೆಯನ್ನ ಬೇಡುತ್ತ ಕೂಡುತ್ತಿದ್ದನಂತೆ.
ಆರೋಪಿಯ ಮಂದ ಬುದ್ಧಿಯವನಾಗಿದ್ದು, ತಾನೂ ಹಲವು ಹತ್ಯೆಗಳನ್ನ ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದಾನಂತೆ. ಅಸಲಿಗೆ ಈತ ಮಾಡಿರುವ ಕೊಲೆಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳೇ ದಾಖಲಾಗಿಲ್ವಂತೆ. ಹೀಗಾಗಿ ಪೊಲೀಸರು ಪತ್ತೆ ಹಚ್ಚುವುದೇ ದುಸ್ತರವಾಗಿದೆ.
ಹುಬ್ಬಳ್ಳಿ ಶಹರ ಠಾಣೆಯ ಇನ್ಸಪೆಕ್ಟರ್ ಆನಂದ ಒಣಕುದುರೆಯವರು, ಜಾಣಾಕ್ಷತನದಿಂದ ಪ್ರಕರಣದ ಜಾಡನ್ನ ಬಿಡಿಸುತ್ತಿದ್ದು, ಇನ್ನಷ್ಟು ಕೊಲೆಗಳ ರಹಸ್ಯ ಹೊರ ಬರಲಿವೆ ಎಂದು ಹೇಳಲಾಗುತ್ತಿದೆ.
ಇಂತಹ ಪ್ರಕರಣವನ್ನ ಹುಬ್ಬಳ್ಳಿ-ಧಾರವಾಡದ ಜನ ಯಾವತ್ತೂ ಕಂಡಿರಲಿಲ್ಲವೆಂದು ಹೇಳಲಾಗಿದ್ದು, ಆರೋಪಿ ರಫೀಕ್ ನ ಬಣ್ಣವನ್ನ ಹೋಳಿಯ ಮುನ್ನಾ ದಿನವೇ ಪೊಲೀಸರು ಕಳಚಿದ್ದಾರೆ.