ಹುಬ್ಬಳ್ಳಿಯಲ್ಲಿ “ರೌಡಿ ಷೀಟರ್”ನ ಭೀಕರ ಹತ್ಯೆ..
ಹುಬ್ಬಳ್ಳಿ: ಮನೆಗೆ ಹೋಗುತ್ತಿದ್ದ ರೌಡಿ ಷೀಟರ್ ನೋರ್ವನನ್ನ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಅರವಿಂದನಗರದ ಪಿಎನ್ ಟಿ ಕ್ವಾಟರ್ಸ್ ಹಿಂದಿನ ರಸ್ತೆಯಲ್ಲಿ ನಡೆದಿದೆ.
ತೊರವಿಹಕ್ಕಲದ ನಿವಾಸಿಯಾಗಿದ್ದ ಅಕ್ಬರ ಅಲ್ಲಾಭಕ್ಷ್ಯ ಮುಲ್ಲಾ ಎಂಬಾತನೇ ಹತ್ಯೆಯಾದ ರೌಡಿ ಷೀಟರ್ ಆಗಿದ್ದು, ಮುಖ ಗುರುತು ಸಿಗದಂತೆ ಮಚ್ಚಿನೇಟು ನೀಡಲಾಗಿದೆ.
ಶಿರಡಿನಗರದ ರಮೇಶ ನೀರಗಟ್ಟಿ ಹಾಗೂ ಇಂದಿರಾನಗರದ ನವೀನ್ ಎಂಬುವವರೊಂದಿಗೆ ಕುಡಿದು ತದನಂತರ ಮನೆಗೆ ಬರುವಾಗ ಸದಾನಂದ ಬುರ್ಲಿ ಎಂಬಾತ ಹೊಡೆದಿದ್ದಾನೆಂದು ಹೇಳಲಾಗಿದೆಯಾದರೂ, ಘಟನೆಯ ವೇಳೆ ಆತನೊಂದಿಗೆ ಹಲವರಿದ್ದರೆಂದು ಹೇಳಲಾಗಿದೆ.
ಹುಬ್ಬಳ್ಳಿಯ ಹೊಸೂರಿನಲ್ಲಿದ್ದ ಅಕ್ಬರ ಹಲವು ವರ್ಷಗಳ ಹಿಂದೆ ಅರವಿಂದನಗರದ ಬಳಿ ಮನೆ ಮಾಡಿಕೊಂಡಿದ್ದ.
ಪ್ರಕರಣವೂ ರಾತ್ರಿ 11.30 ರಿಂದ 12 ಗಂಟೆಯೊಳಗೆ ನಡೆದಿದ್ದು ಘಟನೆಯ ಬಗ್ಗೆ ಹಲವು ವದಂತಿಗಳನ್ನ ಹಬ್ಬಿಸಲಾಗಿದೆಯಾದರೂ ಇದರ ಹಿಂದೆ ಫ್ರೀ ಪ್ಲಾನ್ ಇದೆ ಎಂದು ಹೇಳಲಾಗಿದೆ.
ಹಳೇಹುಬ್ಬಳ್ಳಿ ಠಾಣೆಗೆ ಆರೋಪಿ ಸದಾನಂದ ಸರಂಡರ್ ಆಗಿದ್ದು, ನಗರದಲ್ಲಿ ಕೊಲೆ ಮಾಡಿ ಸರಂಡರ್ ಆಗುವ ನಾಟಕ ಮುಂದುವರೆದಂತಾಗಿದೆ.