ಹುಬ್ಬಳ್ಳಿಯಲ್ಲಿ ತರಕಾರಿ ಕತ್ತರಿಸುವ ಚಾಕುವಿನಿಂದ ಹತ್ಯೆ… ಸ್ಮಾರ್ಟ್ ವಾಚ್ ರಗಳೆ…

ಸ್ಮಾರ್ಟ್ ವಾಚ್ ವಿಚಾರಕ್ಕೇ ಯುವಕನ ಭೀಕರ ಕೊಲೆ
ಹುಬ್ಬಳ್ಳಿ: ಕಳೆದ ಕೆಲವು ದಿನಗಳಿಂದ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೇ ನೆತ್ತರು ಹರಿದಿದ್ದು ಸ್ಮಾರ್ಟ್ ವಾಚ್ ವಿಚಾರಕ್ಕೇ ಸಂಬಂಧಿಸಿದಂತೆ ಯುವಕನಿಗೆ ಚಾಕು ಇರಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ದಾರುಣವಾಗಿ ಮೃತಪಟ್ಟ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶ್ವರ ಕಾಲೋನಿಯಲ್ಲಿ ಈಗಷ್ಟೇ ನಡೆದಿದೆ.
ವೆಂಕಟೇಶ್ವರ ಕಾಲೋನಿಯಲ್ಲಿ ಇಂದು ರಾತ್ರಿ 8 30ಕ್ಕೇ ಸ್ಮಾರ್ಟ್ ವಾಚ್ ವಿಚಾರಕ್ಕೇ ಮಂಜು ಹಾಗೂ ಅಸ್ಲಂ ಮಧ್ಯ ಜಗಳ ಆರಂಭವಾಗಿದೆ. ಜಗಳ ಅತಿರೇಕಕ್ಕೆ ಹೋದ ಪರಿಣಾಮ ಅಸ್ಲಂನ ಎದೆಯ ಭಾಗಕ್ಕೆ ಮಂಜು ಎಂಬಾತ ತರಕಾರಿ ಕತ್ತರಿಸುವ ಚಾಕುವಿನಿಂದ ಇರಿದ ಪರಿಣಾಮ ಅಸ್ಲಂ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದ ಕೂಡಲೇ ಆತನನ್ನು ಸ್ನೇಹಿತರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದರು ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್ ನಲ್ಲಿ ಸಾವನಪ್ಪಿದ್ದಾನೆ.
ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಿಮ್ಸ್ ಆಸ್ಪತ್ರೆಗೆ ಡಿಸಿಪಿ ಸೇರಿದಂತೆ ಕೇಶ್ವಾಪುರ ಠಾಣೆಯ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮೃತಪಟ್ಟ ಅಸ್ಲಂನ ಜೊತೆಗಿದ್ದ ಸ್ನೇಹಿತರಿಂದ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಚಾಕು ಇರಿದು ಪರಾರಿಯಾಗಿರುವ ಮಂಜುವಿನ ಪತ್ತೆಗೆ ಮುಂದಾಗಿದ್ದಾರೆ.