Posts Slider

Karnataka Voice

Latest Kannada News

ಇದ್ದೊಬ್ಬ ಮಗನನ್ನ “50” ಲಕ್ಷಕ್ಕೆ ಉಸಿರು ನಿಲ್ಲಿಸಿದ ‘ಅಪ್ಪ’…

1 min read
Spread the love

ಹುಬ್ಬಳ್ಳಿ: ತೀವ್ರ ಚರ್ಚೆಗೆ ಕಾರಣವಾಗಿದ್ದ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶವವನ್ನ ಕಲಘಟಗಿ ತಾಲೂಕಿನ ದೇವಿಕೊಪ್ಪದ ಬಳಿ ಹೊರಗೆ ತೆಗೆಯಲಾಗಿದ್ದು, ಇನ್ನೊಂದೆಡೆ ಪ್ರಮುಖ ಆರೋಪಿಗಳನ್ನ ಹೆಡಮುರಿಗೆ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಉದ್ಯಮಿ ಭರತ ಜೈನ್ ತನ್ನ ಮಗ ಅಖಿಲನನ್ನ ಹತ್ಯೆ ಮಾಡಲು ಐವತ್ತು ಲಕ್ಷ ರೂಪಾಯಿಗೆ ಸುಫಾರಿ ನೀಡಿ, ತಾನಿರುವ ಜಾಗದ ಕೂಗಳತೆ ದೂರದಲ್ಲಿ ಉಸಿರುಗಟ್ಟಿ ಸಾಯುವಂತೆ ನೋಡಿಕೊಂಡು, ಹುಬ್ಬಳ್ಳಿಯತ್ತ ಹೊರಟು ಬಂದಿದ್ದ.

ಶವ ತೆಗೆದಿರುವ ಹಾಗೂ ಆರೋಪಿಗಳ ಎಕ್ಸಕ್ಲೂಸಿವ್ ದೃಶ್ಯಾವಳಿಗಳು..

ಪ್ರಕರಣದ ಪ್ರಮುಖ ರೂವಾರಿ ಭರತ ಜೈನ್ ಎಂಬುದನ್ನ ಪತ್ತೆ ಹಚ್ಚಿದ ನಂತರ ಅಖಿಲನ ಶವಕ್ಕಾಗಿ ಪೊಲೀಸರು ತಂಡ ಕಟ್ಟಿಕೊಂಡು 48 ಗಂಟೆಗಳ ಕಾಲ ತಡಕಾಡಿ, ಕೊನೆಗೆ ದೇವಿಕೊಪ್ಪದ ಬಳಿ ಇರುವುದನ್ನ ಪತ್ತೆ ಇಂದು ಬೆಳಗಿನ ಜಾವ ಶವವನ್ನ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಯನ್ನ ನಡೆಸಲಾಗುತ್ತಿದೆ.

ಇತ್ತ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಸದಾಶಿವ ಕಾನಟ್ಟಿ ನೇತೃತ್ವದಲ್ಲಿನ ತಂಡವೂ ಆರೋಪಿಗಳಾದ ಪ್ರಭಯ್ಯ ಹೀರೆಮಠ, ಆರೀಪ್ ಬಿಜಾಪುರ, ಟೈಗರ್ ರೆಹಮಾನ ಎಂಬುವವರನ್ನ ಸೇರಿ ಏಳು ಜನರನ್ನ ಬಂಧಿಸಿದ್ದಾರೆ.

ಪೊಲೀಸ್ ಸಿಬ್ಬಂದಿಗಳಾದ ವಿಠ್ಠಲ ಮಾದರ, ಶರಣಪ್ಪ ಕರೆಯಂಕನವರ, ಚಂದ್ರು ಲಮಾಣಿ, ಆನಂದ ಪೂಜಾರ, ಕೃಷ್ಣಾ ಕಟ್ಟಿಮನಿ, ಮೃತ್ಯುಂಜಯ ಕಾಲವಾಡ, ರಾಗಿ, ರಾಮಾಪುರ, ಸುನೀಲ ಕಾರ್ಯಾಚರಣೆ ನಡೆಸಿದ್ದರು.


Spread the love

Leave a Reply

Your email address will not be published. Required fields are marked *