ಮಗನನ್ನೇ ದತ್ತಕ ಕೊಟ್ಟವ ಚರಂಡಿಯಲ್ಲಿ ಹೆಣವಾದ: ಹತ್ಯೆಗೆ ಕಾರಣವಾಗಿದ್ದು….!
ಹುಬ್ಬಳ್ಳಿ: ಕಳೆದ ಎರಡು ತಿಂಗಳ ಹಿಂದೆ ತನ್ನ ಐದನೇ ಮಗುವನ್ನ ದತ್ತಕಕ್ಕೆ ಕೊಟ್ಟು, ಹೆಂಡತಿ ಮಕ್ಕಳೊಂದಿಗೆ ಕ್ಷೇಮವಾಗಿದ್ದ ವ್ತಕ್ತಿಯನ್ನ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯ ದೇವಾಂಗ ಪೇಟೆಯಲ್ಲಿ ನಡೆದಿದೆ.
ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಾಬುಸಾಬ ಅಲ್ಲಾಭಕ್ಷ ಶಿವಳ್ಳಿ ಎಂಬಾತನದ್ದೆ ಕೊಲೆಯಾಗಿದ್ದು, ನಿನ್ನೆ ಮಧ್ಯಾಹ್ನ ಕೆಲಸ ಮಾಡಿ ಮನೆಗೆ ಬಂದು, ಹೊರಗೆ ಹೋದವ ಮತ್ತೆ ಸಿಕ್ಕಿದ್ದು ಹೆಣವಾಗಿ. ಕೊಲೆ ಮಾಡಿ ಬೇರೆ ಸ್ಥಳದಿಂದ ತಂದು ದೇವಾಂಗಪೇಟೆ ಚರಂಡಿಯಲ್ಲಿ ಹಾಕಿರಬಹುದೆಂದು ಶಂಕಿಸಲಾಗಿದೆ.
ಐದು ಮಕ್ಕಳನ್ನ ಹೊಂದಿರುವ ಹಜರತಬಿ ಮತ್ತು ಮಾಬುಸಾಬ ಕುಟುಂಬ ಹೊಂದಿದೆ. ಆದರೂ, ಮಾಬುಸಾಬ ಅನೈತಿಕ ಸಂಬಂಧ ಹೊಂದಿದ್ದನೆಂಬ ಆರೋಪ ಕೇಳಿ ಬಂದಿದೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಅಶೋಕನಗರ ಠಾಣೆ ಪೊಲೀಸರು, ಶವವನ್ನ ಕಿಮ್ಸಗೆ ರವಾನೆ ಮಾಡಿದ್ದಾರೆ.