ಹುಬ್ಬಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
1 min readಹುಬ್ಬಳ್ಳಿ: ಪ್ರತಿಷ್ಠಿತ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರ ಮಗನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ದೇಶಪಾಂಡೆನಗರದ ಕೃಷ್ಣ ಕಲ್ಯಾಣ ಮಂಟಪದ ಬಳಿ ಸಂಭವಿಸಿದೆ.
ಭವಾನಿನಗರದ ನಿವಾಸಿ ಲೋಕೇಶ ಕಡೆಮನಿ ಎಂಬ ಯುವಕನನ್ನ ಅಶೋಕನಗರ ಠಾಣೆ ವ್ಯಾಪ್ತಿಯ ಐದಾರು ಜನ ಕೂಡಿಕೊಂಡು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಪೆಸ್ಟ್ ಕಂಟ್ರೋಲ್ ಗುತ್ತಿಗೆದಾರನಾಗಿದ್ದ ಕೃಷ್ಣಾ ಕಡೆಮನಿ ಅವರ ಪುತ್ರನೇ ಕೊಲೆಯಾಗಿದ್ದು, ಈತನ ಗೆಳೆಯರೇ ಕೊಲೆ ಮಾಡಿದ್ದಾರಾ.. ಅಥವಾ ತಂದೆಯ ಮೇಲಿನ ದ್ವೇಷದಿಂದ ಮಗನನ್ನ ಕೊಲೆ ಮಾಡಿದ್ರಾ ಅನ್ನೋ ಮಾಹಿತಿ ಹೊರಬರಬೇಕಿದೆ.
ಲೋಕೇಶ ಇತ್ತೀಚೆಗೆ ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದನೆಂದು ಹೇಳಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಲೋಕೇಶ ಕಡೆಮನಿ ಶವವನ್ನ ಕಿಮ್ಸ್‌ಗೆ ರವಾನೆ ಮಾಡಲಾಗಿದ್ದು, ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ನಡೆದ ಘಟನೆ ಮಾಹಿತಿ ಸಂಗ್ರಹಿಸಿ ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ.