ಈ ವರ್ಷದ ಭೀಕರ ಕೊಲೆಯಿದು- ಊರಲ್ಲೇ ಹೊರಟವನಿಗೆ ಆತ ಮಾಡಿದ್ದೇನು..?
ಕಲಬುರಗಿ: ಇದೊಂದು ಅಮಾನವೀಯ ಘಟನೆ. ಮನುಷ್ಯ ಕೋಪ ಎಷ್ಟೊಂದು ದುರ್ಭವಾಗಿರತ್ತೆ ಎಂಬುದನ್ನ ತೋರಿಸುವ ಘಟನೆಯಿದು. ಒಂಬತ್ತು ವರ್ಷದ ಹಗೆತನವನ್ನ ರುಂಡವನ್ನ ಬೇರ್ಪಡಿಸುವ ಮೂಲಕ ಮುಗಿಸಿಬಿಟ್ಟಿದ್ದಾನೆ. ಆ ಕ್ರೂರ ಘಟನೆ ನಡೆದದ್ದರ ಬಗ್ಗೆ ಮಾಹಿತಿಯನ್ನ ಸಂಪೂರ್ಣವಾಗಿ ನೋಡಿ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಈ ವರ್ಷದ ಅಂತ್ಯತ ಕ್ರೂರ ಕೊಲೆ ನಡೆದಿದೆ. ಕೊಲೆಯಾದವನ ಹೆಸರು ಬಾಬು ಮಲ್ಲೇಶಪ್ಪ ಕೋಬಾಳ, ಬೈಕಿನಲ್ಲಿ ಹೊರಟಾಗ ಕೊಡಲಿಯಿಂದ ರುಂಡವನ್ನೇ ತೆಗೆದಿದ್ದಾನೆ.
ಒಂಬತ್ತು ವರ್ಷದ ಹಿಂದೆ ಕೊಲೆ ಮಾಡಿದ್ದ ಬಾಬುವನ್ನ, ವಿರೋಧಿ ಬಣದ ಪ್ರಭು ಕಾಂಬಳೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ, ಕೆಳಗೆ ಬಿದ್ದ ನಂತರ ಆತನ ರುಂಡವನ್ನ ಮುಂಡದಿಂದ ಬೇರ್ಪಡಿಸಿ, ಆತನ ಕೈಯಲ್ಲೇ ಇಟ್ಟಿದ್ದಾನೆ.
ಪ್ರಕರಣದಿಂದ ಸಂಗಾಪುರ ಗ್ರಾಮ ತಲ್ಲಣಗೊಂಡಿದ್ದು, ದೇವಲಗಾಣಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಅರೋಪಿಯ ಪತ್ತೆಗಾಘಿ ಜಾಲ ಬೀಸಿದ್ದಾರೆ.