ಮತ್ತೋಬ್ಬನ ಹೆಂಡತಿಯೊಂದಿಗೆ ಸಿಕ್ಕ ತಕ್ಷಣವೇ ಕೊಲೆಯಾದ ಗೃಹಸ್ಥ
ಕಲಬುರಗಿ: ತನ್ನ ಹೆಂಡತಿಯನ್ನ ಮನೆಯಲ್ಲಿ ಬಿಟ್ಟು ಮತ್ತೋಬ್ಬನ ಹೆಂಡತಿಯ ಜೊತೆ ಬೈಕ್‌ಲ್ಲಿ ಹೊರಟಾಗ ಆಕೆಯ ಗಂಡನ ಮನೆಯವರು ಈತನನ್ನ ನಡು ರಸ್ತೆಯಲ್ಲೇ ಕೊಲೆ ಮಾಡಿದ ಘಟನೆ ಶಹಬಾದ್ ಬಳಿ ನಡೆದಿದೆ.
ಜಗದೀಶ ಎಂಬಾತನೇ ಕೊಲೆಯಾಗಿದ್ದು, ಗೃಹಸ್ಥನಾಗಿದ್ದರೂ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ಆತನನ್ನ ಕಾಯುತ್ತಿದ್ದ ಸಮಯದಲ್ಲಿ ಜಗದೀಶ ಬೈಕ್‌ಲ್ಲಿ ಅದೇ ಮಹಿಳೆಯನ್ನ ಕರೆದುಕೊಂಡು ಬಂದಿದ್ದಾನೆ.
ಇದನ್ನ ಗಮನಿಸಿದ ಮಹಿಳೆಯ ಸಂಬಂಧಿಕರು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತೀವ್ರ ಗಾಯಗೊಂಡವನನ್ನ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ನಡಿಯಿಯಾದರೂ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಶಹಬಾದ್ ಠಾಣೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.