ಹುಬ್ಬಳ್ಳಿಯ ರಾಯನಾಳದ ನಡು ಬೀದಿಯಲ್ಲೇ “ಗ್ರಾಪಂ ಸದಸ್ಯ”ನ ಕಗ್ಗೊಲೆ….
1 min readExclusive
ಹುಬ್ಬಳ್ಳಿ: ನಗರದಿಂದ ಬೈಕಿನಲ್ಲಿ ಹೋಗುತ್ತಿದ್ದ ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯನೂ ಆಗಿದ್ದ ರೌಡಿ ಷೀಟರನನ್ನ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಪ್ರಕರಣ ಸೋಮವಾರ ರಾತ್ರಿ ಸಂಭವಿಸಿದೆ.
ಘಟನೆ, ಘಟನೆಯ ನಂತರ ಮತ್ತೂ ಡಿಸಿಪಿ ಸಾಹಿಲ್ ಬಾಗ್ಲಾ ಅವರ ಹೇಳಿಕೆಯ ವೀಡಿಯೋ ಇಲ್ಲಿದೆ ನೋಡಿ…
ಗಂಗಿವಾಳ ಗ್ರಾಮ ಪಂಚಾಯತ್ ಸದಸ್ಯನ ಭೀಕರ ಕೊಲೆ.
ರಾಯನಾಳ ಗ್ರಾಮದ ಮಧ್ಯದಲ್ಲಿಯೇ ಭೀಕರವಾಗಿ ಕೊಚ್ಚಿ ಕೊಲೆಗೈದ ದುಸ್ಕರ್ಮಿಗಳು.
ರಾತ್ರೀ 10-30 ರ ಸುಮಾರಿಗೆ 10 ಕ್ಕೂ ಹೆಚ್ಚು ಜನರಿಂದ ಸ್ವಗ್ರಾಮದಲ್ಲಿಯೇ ಮಾರಕಾಸ್ತ್ರಗಳಿಂದ ಹೊಡೆದು ಕಗ್ಗೊಲೆ
ಪ್ರೇಮ ವಿವಾಹ, ರಾಜಕೀಯ ದ್ವೇಷದಿಂದ ರಾಯನಾಳದಲ್ಲಿ ನಡೆದಿರುವ ಕೊಲೆ.
ದೀಪಕ್ ಪಠದಾರಿ ಕೊಲೆಯಾಗಿರುವ ಗ್ರಾಮ ಪಂಚಾಯತ ಸದಸ್ಯ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ ದೀಪಕ ಪಠದಾರಿ.
ಸ್ಥಳಕ್ಕೇ ಡಿಸಿಪಿ ಸಾಹಿಲ್ ಬಾಗ್ಲಾ ಬೇಟಿ,ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ.
10ಕ್ಕೂ ಹೆಚ್ಚು ಜನ ಆರೋಪಿಗಳನ್ನು ವಶಕ್ಕೆ ಪಡೆದಿರುವ ಹಳೆ ಹುಬ್ಬಳ್ಳಿ ಪೊಲೀಸರು
ಹಳೆ ಹುಬ್ಬಳ್ಳಿ ಪೋಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು.