ಲಾಕ್ ಡೌನ್: ಬದುಕಿಗೆ ತವರಿಗೆ ಬಂದವಳು ಬೇರೆಯವನಿಗಾಗಿ ಗಂಡನನ್ನೇ ಸಮಾಧಿ ಮಾಡಿದ್ಲು..!
ಗದಗ: ಗೋವಾದಲ್ಲಿ ಮೀನು ಮಾರಾಟ ಮಾಡುತ್ತ ಬದುಕು ಕಟ್ಟಿಕೊಂಡಿದ್ದ ಕುಟುಂಬವೊಂದು ಲಾಕ್ ಡೌನ್ ಸಮಸ್ಯೆಯಿಂದ ಗದಗ ತಾಲೂಕಿನ ಕಬಲಾಯತಕಟ್ಟಿ ತಾಂಡಾಕ್ಕೆ ಮರಳಿ ಬಂದಿತ್ತು. ಆದ್ರೆ, ಇಲ್ಲಿಗೆ ಬಂದ ಮೇಲೆ ಜೀವನವೇ ಹೋಗುವಂತಾದ ಘಟನೆ ನಡೆದಿದೆ.
ಗೋವಾ ಬಿಟ್ಟು ಬಂದಿದ್ದ ಲಕ್ಷ್ಮಣ ಲಮಾಣಿ ಮತ್ತು ಲಲಿತಾ ಲಮಾಣಿ ಜೀವನ ನಡೆಸುತ್ತಿದ್ದಾಗಲೇ, ಲಲಿತಾ ಸೋಮಪ್ಪ ಎಂಬಾತನೊಂದಿಗೆ ಅನೈತಿಕ ಸಂಬಂಧವನ್ನ ಬೆಳೆಸಿಕೊಂಡಿದ್ದಳು. ಈ ವಿಷಯ ಪತಿ ಲಕ್ಷ್ಮಣನಿಗೆ ಗೊತ್ತಾಗಿದ್ದರಿಂದ ಪದೇ ಪದೇ ಜಗಳಕ್ಕೆ ನಿಲ್ಲತೊಡಗಿದ್ದ.
ಇದನ್ನೇ ನೆಪ ಮಾಡಿಕೊಂಡ ಪತ್ನಿ ಲಲಿತಾ, ಅನೈತಿಕ ವ್ಯಕ್ತಿ ಸೋಮಪ್ಪನೊಂದಿಗೆ ಗಂಡನನ್ನ ಕೊಲೆ ಮಾಡಿದ್ದಾಳೆ. ಅಷ್ಟೇ ಅಲ್ಲ, ಕುತ್ತಿಗೆ ಬಿಗಿಯಲು ಬಳಕೆ ಮಾಡಿದ ಹಗ್ಗವನ್ನ ಸುಟ್ಟು, ಏನೂ ಹಾಗೇ ಇಲ್ಲವೆಂಬಂತೆ ರಾತ್ರಿಪೂರ್ತಿ ಸತ್ತ ಗಂಡನ ಶವದೊಂದಿಗೆ ಮಲಗಿದ್ದಾಳೆ.
ಬೆಳಕಾದ ತಕ್ಷಣವೇ ಬಾಯಿ ಬಾಯಿ ಬಡಿದುಕೊಂಡು ಜನರನ್ನ ಸೇರಿಸಿ, ನನ್ನ ಪತಿ ಸತ್ತಿದ್ದಾನೆಂದು ಹೇಳಿ ಉಳಿದುಕೊಳ್ಳುವ ಪ್ರಯತ್ನ ಮಾಡಿದ್ದಾಳಾದರೂ, ಸತ್ತ ಗಂಡನ ಗುತ್ತಿಗೆಯಲ್ಲಿದ್ದ ಕಲೆ ಜನರಲ್ಲಿ ಸಂಶಯ ಮೂಡಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮುಳಗುಂದ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಬಂದು ತಪಾಸಣೆ ಮಾಡಿ, ವಿಚಾರಣೆ ಮಾಡಿದಾಗ, ಅನೈತಿಕ ಸಂಬಂಧ ಬಯಲಾಗಿದೆ.