ಅಣ್ಣನ ಹೆಂಡತಿ, ಮಕ್ಕಳನ್ನ ಹತ್ಯೆಗೈದ ಪಾಪಿ ಕುಮಾರಗೌಡ್ರ…!

ಕೊಲೆ ಮಾಡಿ ಪರಾರಿಯಾಗಿರುವ ಹಂತಕ
ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣವಂತೆ
ಹಾವೇರಿ: ಕುಟುಂಬದಲ್ಲಿನ ಜಗಳದಿಂದ ಎರಡು ಮಕ್ಕಳು ಸೇರಿದಂತೆ ಮೂವರನ್ನ ಹತ್ಯೆ ಮಾಡಿರುವ ಪ್ರಕರಣ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಸಂಭವಿಸಿದೆ.
ಹತ್ಯೆಯಾದವರನ್ನ ಗೀತಾ ಮರಿಗೌಡ್ರು (32), ಅಕುಲ್ (10), ಅಂಕಿತಾ (7) ವರ್ಷ ಎಂದು ಗುರುತಿಸಲಾಗಿದ್ದು, ಕುಮಾರಗೌಡ್ ಮರಿಗೌಡ್ರು (35) ಎಂಬಾತನೇ ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ.
ಸ್ವಂತ ಅಣ್ಣ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಅವರ ಹೆಂಡತಿ ಮತ್ತು ಮಕ್ಕಳ ಹತ್ಯೆಗೈದ ಪಾಪಿ ತಮ್ಮ ಪರಾರಿಯಾಗಿದ್ದಾನೆ.
ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನ ಮುಂದುವರೆಸಿದ್ದಾರೆ.