Posts Slider

Karnataka Voice

Latest Kannada News

ಹೆಂಡ್ತಿ ಹೊಡೆದವನಿಗೆ ಶಿವನಪಾದ ತೋರಿಸಿದ ಧಾರವಾಡದ ತಂದೆ…!

1 min read
Spread the love

ಧಾರವಾಡ: ದಿನದ ಬಹುತೇಕ ಸಮಯವನ್ನ ಕುಡಿತದಲ್ಲಿ ತೊಡಗಿ ಮನೆಯವರಿಗೆ ಮಾರಕವಾಗಿದ್ದ ಮಗನನ್ನ ಹಾರೆಯಿಂದ ಹೊಡೆದು‌ ತಂದೆ ಕೊಲೆ ಮಾಡಿರುವ ಘಟನೆ ಶಿವಗಂಗಾನಗರದ ತೆಲಗರ ಓಣಿಯಲ್ಲಿ ನಡೆದಿದೆ.

ಬಸವರಾಜ ಹಿರೇಕುಂಬಿ ಎಂಬ 36 ವಯಸ್ಸಿನ ಮಗನೇ ಮನೆಯವರನ್ನ ಮನಬಂದಂತೆ ಥಳಿಸುತ್ತಿದ್ದ. ಕಳೆದ ಮೂರ್ನಾಲ್ಕು ದಿನದ ಹಿಂದೆ ಹೆಂಡತಿಯನ್ನ ಹೊಡೆದಿದ್ದ. ಇದೇ ಕಾರಣಕ್ಕೆ ಧಾರವಾಡ ಶಹರ ಠಾಣೆಯಲ್ಲಿ ದೂರನ್ನ ಬಸವರಾಜನ ತಂದೆ-ತಾಯಿ ಹಾಗೂ ಮಡದಿ ನೀಡಿದ್ದರು.

ಈ ವಿಷಯ ಗೊತ್ತಾಗಿ ಬಸವರಾಜ ಮತ್ತೆ‌ ಕುಡಿದು ಬಂದು ಮನೆಯವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದರಿಂದ ರೋಸಿ ಹೋದ ಫಕ್ಕೀರಪ್ಪ ಹಿರೇಕುಂಬಿ ಹಾರೆಯಿಂದ ಹೊಡೆದು ಮಗ ಬಸವರಾಜನನ್ನ ಕೊಲೆ ಮಾಡಿದ್ದಾನೆ.

ಮಾಹಿತಿ ಸಿಗುತ್ತಿದ್ದ ಹಾಗೇ ಶಹರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಟೀಂ, ಆರೋಪಿಯನ್ನ ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed