ರುಂಡ-ಮುಂಡ ಪ್ರಕರಣ ಮಹತ್ವದ ಸಾಕ್ಷ್ಯ ಸಂಗ್ರಹಿಸಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸರು….!

ಹುಬ್ಬಳ್ಳಿ: ತೀವ್ರ ಕೌತುಕ ಮತ್ತೂ ಆತಂಕ ಮೂಡಿಸಿದ್ದ ರುಂಡ-ಮುಂಡ ಸಿಕ್ಕ ಪ್ರಕರಣದ ಮಹತ್ವದ ಸಾಕ್ಷ್ಯಗಳನ್ನ ಪತ್ತೆ ಹಚ್ಚುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಜಿಲ್ಲೆಯ ಕ್ರೈಂ ಇತಿಹಾಸದಲ್ಲಿ ಸಂಚಲನ ಮೂಡಿಸಿದ್ದ ಪ್ರಕರಣವಿದು.

ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯೋರ್ವನ ರುಂಡ ಕಳೆದ ಐದು ದಿನಗಳ ಹಿಂದೆ ದೊರಕಿತ್ತು. ಅದಾದ ಸಂಜೆ, ಕೈ-ಕಾಲು ಇಲ್ಲದ ದೇಹ ಹುಬ್ಬಳ್ಳಿ ಕೇಶ್ವಾಪುರ ಠಾಣೆಯ ವ್ಯಾಪ್ತಿಯಲ್ಲಿನ ಸಂಸ್ಕಾರ ಶಾಲೆಯ ಸಮೀಪದಲ್ಲಿ ದೊರಕಿತ್ತು. ಅಂದೇ ಸಂಜೆ ವೇಳೆಗೆ ಒಂದು ಕಾಲು ಹೊರತುಪಡಿಸಿ ಇನ್ನುಳಿದ ಎರಡು ಕೈ, ಒಂದು ಕಾಲು ದೇಹ ಸಿಕ್ಕ ಜಾಗದ ಸಮೀಪದಲ್ಲಿ ದೊರಕಿದ್ದವು.
ಈ ಕಾರಣದಿಂದ ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ಹಾಗೂ ಧಾರವಾಡ ಜಿಲ್ಲಾ ಪೊಲೀಸರ ನಿದ್ದೆಯನ್ನ ಕೆಡಿಸಿತ್ತು. ಇಷ್ಟೊಂದು ಕ್ರೂರವಾಗಿ ಕೊಲೆ ಮಾಡಲು ಕಾರಣವಾಗಿದ್ದೇನು ಮತ್ತೂ ಹತ್ಯೆಯಾಗಿರುವ ವ್ಯಕ್ತಿ ಯಾರೂ ಎಂಬುದನ್ನ ಪತ್ತೆ ಹಚ್ಚಲು ತೀವ್ರ ಹೆಣಗಾಟ ಆರಂಭಗೊಂಡಿತ್ತು.
ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ರಮೇಶ ಗೋಕಾಕ ನೇತೃತ್ವದಲ್ಲಿ ಹಗಲು-ರಾತ್ರಿ ಕಾರ್ಯಾಚರಣೆ ನಡೆದಿತ್ತು. ಸಿಕ್ಕ ಒಂದೇ ಒಂದು ಸುಳಿವು, ಪೊಲೀಸರನ್ನ ಕೊಲೆಗಾರರ ಬಳಿ ತೆಗೆದುಕೊಂಡು ಹೋಗಿದೆ.
ಗ್ರಾಮೀಣ ಠಾಣೆ ಪೊಲೀಸರು ಕೃತ್ಯಕ್ಕೆ ಬಳಕೆ ಮಾಡಿದ ವಾಹನ ಹಾಗೂ ಹತ್ಯೆ ಮಾಡಿದವರನ್ನ ಬಂಧನ ಮಾಡಿದ್ದಾರೆ.
ಹತ್ಯೆಯಾಗಿರುವ ವ್ಯಕ್ತಿ, ಕ್ರೂರಿ ಕೊಲೆಗಾರರು ಯಾರೂ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಹಲವು ಆತಂಕ, ಕೌತುಕ, ಭಯ ಮೂಡಿಸಿದ್ದ ಪ್ರಕರಣ ಬಯಲಾಗಿದೆ. ಮತ್ತೊಂದಿಷ್ಟು ವಿವರವನ್ನ ಕರ್ನಾಟಕವಾಯ್ಸ್.ಕಾಂ ನಿಮ್ಮ ಮುಂದಿಡಲಿದೆ.
