ಹಡೆದವ್ವಳಿಂದಲೇ ಬಾಲಕಿಯ ಕೊಲೆ: ಇದು ಕಲಿಯುಗ ಕಣ್ರೀ..!

ಮೈಸೂರು: ತಾನೇ ಜನ್ಮ ನೀಡಿದ ಹೆಣ್ಣು ಮಗುವನ್ನ ಮಲಗಿದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ಸಂಭವಿಸಿದೆ.
ಆರು ವರ್ಷದ ಜಯಲಕ್ಷ್ಮೀ ಎಂಬ ಮುದ್ದಾದ ಹುಡುಗಿಯನ್ನ ತನ್ನ ಪಕ್ಕದಲ್ಲಿಯೇ ತಾಯಿ ಪವಿತ್ರ ಮಲಗಿಸಿಕೊಳ್ಳುತ್ತಿದ್ದಳು. ತನ್ನ ಮೊದಲನೇಯ ಪತಿಯನ್ನ ಬಿಟ್ಟು ಮತ್ತೊಂದು ಮದುವೆಯಾದ ಮೇಲೆ ಹೀಗೆಯೇ ನಡೆದುಕೊಳ್ಳುತ್ತಿದ್ದಳು. ಆದರೆ, ಮೊದಲ ಗಂಡನ ಮಗಳೆಂಬ ಕಾರಣಕ್ಕೆ ಆಕೆಯನ್ನ ಮುಗಿಸಿ, ಅಂತ್ಯ ಸಂಸ್ಕಾರವನ್ನೂ ಮಾಡಿಬಿಟ್ಟಿದ್ದಾರೆ.
ಪವಿತ್ರಳ ಮೊದಲ ಗಂಡ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಮೇಟಗಳ್ಳಿ ಠಾಣೆ ಪೊಲೀಸರು, ಇಡೀ ಪ್ರಕರಣದ ಜಾಲವನ್ನ ಬೇಧಿಸಿದ್ದಾರೆ. ಎಂಟು ವರ್ಷದ ಮಗುವನ್ನ ಕೊಲೆ ಮಾಡಲು ಎರಡನೇಯ ಗಂಡ ಸೂರ್ಯ, ಅತ್ತೆ ಗೌರಮ್ಮ ಕೂಡಾ ಸಹಕರಿಸಿದ್ದು ತನಿಖೆಯ ವೇಳೆ ಬಹಿರಂಗಗೊಂಡಿದೆ.
ಅನುಮಾನ ಬಾರದಂತೆ ಮಾಡಿದ್ದ ಅಂತ್ಯಸಂಸ್ಕಾರದ ಬಗ್ಗೆಯೂ ಮಾಹಿತಿ ಪಡೆದು, ಮತ್ತೋಮ್ಮೆ ಜಯಲಕ್ಷ್ಮೀಯ ಶವ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದು, ಇದು ಅಸಹಜ ಸಾವು ಎಂದು ದೃಢಪಟ್ಟಿದೆ. ಪವಿತ್ರ ಸಿದ್ದೇಶನೊಂದಿಗೆ ಮದುವೆಯಾಗಿ ಒಂದು ಮಗುವಾದ ನಂತರ ಮಗುವಿನ ಸಮೇತ ಆತನನ್ನ ಬಿಟ್ಟು ಮತ್ತೊಂದು ಮದುವೆಯಾಗಿ, ಮಗಳನ್ನ ಜೊತೆಗೆ ಕರೆದುಕೊಂಡು ಹೋಗಿದ್ದಳು.
ತಾಯಿ ದೇವರು ಎನ್ನುವುದನ್ನ ಮರೆತಂತೆ ನಡೆದುಕೊಂಡಿರುವ ಪವಿತ್ರ ಎಂಬಾಕೆಯ ಬಗ್ಗೆ ಕುಟುಂಬದವರಿಗೆ ಅಸಹ್ಯ ಮೂಡಿದೆ.