”ಕೊಂದಿದ್ದು ನಾನೇ… ಮಚ್ಚಿನ ಸಮೇತ ಕೋರ್ಟ್‌ಗೆ ಬರ್ತೇವಿ!” : ಹತ್ಯೆ ಕೇಸ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ವಿಸ್ಟ್…
ಹತ್ಯೆ ಪ್ರಕರಣ: ‘ನಾನೇ ಕೊಂದಿದ್ದು’ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಪ್ರತ್ಯಕ್ಷ!
ಕೋಲಾರ: ಮೆಟ್ಟುಬಂಡೆ ಬಳಿ ಜನವರಿ 27 ರಂದು ನಡೆದಿದ್ದ ಯಲ್ಲೇಶ್ (41) ಎಂಬುವವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಬಿಂದು ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ನರಸಾಪುರದ ಸಂತೋಷ್ ಪುತ್ರ ಬಿಂದು ಕುಮಾರ್, ತಾನು ಹಾಗೂ ಅಕ್ಷಯ್ ತಂಡ ಸೇರಿ ಈ ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ. “ನನ್ನ ತಂಗಿಯ ಬಗ್ಗೆ ಯಲ್ಲೇಶ್ ಅಸಭ್ಯವಾಗಿ ಮಾತನಾಡಿದ್ದ. ಈ ಬಗ್ಗೆ ಐದು ಬಾರಿ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ನಮ್ಮನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕೆ ನಾನೇ ಮೊದಲು ಆತನನ್ನು ಮುಗಿಸಿದೆ” ಎಂದು ಆರೋಪಿ ಹೇಳಿಕೊಂಡಿದ್ದಾನೆ.
ಅಲ್ಲದೆ, ಈ ಕೊಲೆಗೂ ತನ್ನ ತಂದೆ ಸಂತೋಷ್‌ಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಂದು, ಶೀಘ್ರದಲ್ಲೇ ಆಯುಧದ ಸಮೇತ ನ್ಯಾಯಾಲಯಕ್ಕೆ ಶರಣಾಗುವುದಾಗಿ ತಿಳಿಸಿದ್ದಾನೆ. ಹಳೇ ದ್ವೇಷ ಹಾಗೂ ಕೌಟುಂಬಿಕ ಕಲಹವೇ ಈ ಹತ್ಯೆಗೆ ಕಾರಣ ಎನ್ನಲಾಗಿದೆ.
