ನತದೃಷ್ಟನ “ಹೆಣಕ್ಕಾಗಿ” ಹುಬ್ಬಳ್ಳಿ ಪೊಲೀಸರ ಹೆಣಗಾಟ…

ಹುಬ್ಬಳ್ಳಿ: ನಾಪತ್ತೆಯಾಗಿದ್ದ ಯುವಕನ ಹತ್ಯೆಯಾಗಿದೆ ಎಂಬ ಆರೋಪದಡಿ ಆರೋಪಿಗಳನ್ನ ಬಂಧಿಸಿರುವ ಕೇಶ್ವಾಪುರ ಠಾಣೆಯ ಪೊಲೀಸರು, ಹೆಣ ಹುಡುಕಲು ಹರಸಾಹಸ ಪಡುತ್ತಿದ್ದಾರೆ.
ಹೌದು… ಉದ್ಯಮಿ ಭರತ ಜೈನ್ ಅವರ ಪುತ್ರ ನಿಖಿಲ ಜೈನ್ ಕಾಣೆಯಾಗಿದ್ದಾನೆಂದು ತಂದೆ ದೂರು ನೀಡಿದ್ದರು. ಆದರೆ, ನಿಖಿಲ ಜೈನ್ ನನ್ನ ಸುಫಾರಿ ನೀಡಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದರು. ಅಷ್ಟೇ ಅಲ್ಲ, ಹತ್ತು ಲಕ್ಷಕ್ಕೆ ಸುಫಾರಿ ಪಡೆದಿದ್ದ ಮೂವರ ಪೈಕಿ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಇನ್ನೂ ಸಿಕ್ಕಿಲ್ಲ.
Exclusive video
ನಿಖಿಲ ಜೈನ್ ಕೊಲೆ ನಡೆದಿರುವದು ಕನ್‌ಫರ್ಮ ಆಗಿದೆಯಾದರೂ ಶವ ಮಾತ್ರ ಸಿಗುತ್ತಿಲ್ಲ. ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಬಳಿಯ ಡಾಬಾ ಬಳಿ ಶವ ಹೂಳಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ತದನಂತರ ದೇವರಗುಡಿಹಾಳ ತೋಟದಲ್ಲಿ ಮುಚ್ಚಲಾಗಿದೆ ಎಂಬ ಮಾಹಿತಿಯಿತ್ತು. ಪೊಲೀಸರಿಗೆ ಮಾತ್ರ ಎಲ್ಲಿಯೂ ಸಿಗುತ್ತಿಲ್ಲ. ಹೀಗಾಗಿ ಪೊಲೀಸರು ಹೆಣಕ್ಕಾಗಿ ಹೆಣಗಾಟ ನಡೆಸುತ್ತಿದ್ದಾರೆ.