ಕಾಂಗ್ರೆಸ್ ಮುಖಂಡರಾಗಿದ್ದ ವಕೀಲನ ಹಾಡುಹಗಲೇ ಕೋರ್ಟ್ ಆವರಣದಲ್ಲೇ ಹತ್ಯೆ…!

ವಿಜಯನಗರ (ಹೊಸಪೇಟೆ): ಕೋರ್ಟ್ ಆವರಣದಲ್ಲಿಯೇ ಕಾಂಗ್ರೆಸ್ ಮುಖಂಡರು ಆಗಿರುವ ವಕೀಲರೊಬ್ಬರನ್ನ ನ್ಯಾಯಾಲಯದ ಆವರಣದಲ್ಲಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಆವರಣದಲ್ಲೇ ಆರೋಪಿಗಳು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ವಕೀಲ, ಕಾಂಗ್ರೆಸ್ ಮುಖಂಡ ಡಾ.ತಾರಿಹಳ್ಳಿ ವೆಂಕಟೇಶ್ ಕೊಲೆಯಾಗಿದ್ದು, ಕೋರ್ಟ್ ಆವರಣದಲ್ಲಿ ಕೂತ ಸಮಯದಲ್ಲಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ಹತ್ಯೆಯನ್ನ ಮನೋಜ್ ಎಂಬ ಯುವಕ ಮಾಡಿದ್ದು, ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ.

ಮನೋಜ ಎಂಬಾತ ಬೆಳಿಗ್ಗೆಯಿಂದಲೇ ಕೋರ್ಟ್ ಆವರಣದಲ್ಲಿ ಕಾಯುತ್ತ ಕುಳಿತಿದ್ದನಂತೆ. ನಂತರ ವಕೀಲ ಡಾ.ತಾರಿಹಳ್ಳಿ ವೆಂಕಟೇಶ ಬಂದು, ಆರಾಮಾಗಿ ಕೂತ ಮೇಲೆ, ಚೀಲದಲ್ಲಿ ತೆಗೆದುಕೊಂಡು ಹೋಗಿದ್ದ ಮಚ್ಚಿನಿಂದ ಹತ್ಯೆ ಮಾಡಿದ್ದಾನೆಂದು ಹೇಳಲಾಗಿದೆ.

ಘಟನೆಯ ಸುದ್ದಿ ಹರಡುತ್ತಿದ್ದ ಹಾಗೇ ಸಂಬಂಧಿಕರು ಸ್ಥಳಕ್ಕೆ ಬಂದಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಕೋರ್ಟ್ ಆವರಣದಲ್ಲಿ ಜನಸಾಗರವೇ ಸೇರಿದ್ದು, ಬಹುತೇಕರು ಅಚ್ಚರಿಗೊಂಡಿದ್ದಾರೆ.