ನಗರಸಭೆ ಸದಸ್ಯನ ಕೊಲೆ-24ಗಂಟೆಯಲ್ಲೇ ಕೊಲೆಪಾತಕರು ಅಂದರ್
ರಾಯಚೂರು: ನಗರದ 8ನೇ ವಾರ್ಡಿನ ನಗರಸಭೆ ಸದಸ್ಯನ ಕೊಲೆ ಮಾಡಿದ ಆರು ದುಷ್ಕರ್ಮಿಗಳನ್ನ ಪೊಲೀಸರು 24 ಗಂಟೆಯಲ್ಲೇ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ನಡೆದಿದೆ.
ಸದರ ಬಜಾರ ಪೊಲೀಸ್ ಠಾಣೆ ವ್ಯಾಪ್ತಿಯ ಜಾಕೀರ ಹುಸೇನ ವೃತ್ತದಲ್ಲಿ ನಿಂತಿದ್ದ ನಗರಸಭೆಯ ಸದಸ್ಯನನ್ನ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ರಾಯಚೂರು ಸಿಯಾತಲಾಬ್ ನಿವಾಸಿಗಳಾದ ಸಯ್ಯದ್ ಮಾಸೂಮ್ @ಗೋರಾ ಮಾಸೂಮ್, ರಿಯಾಜ್ ಮೊಹ್ಮದ್ ಅಬ್ದುಲ್ , ಅಯ್ಯ ಬಾವಡಿಯ ಸೈಯದ್ ಅಫ್ಸರ್ ಅಮೀರ್ ಪಾಷಾ, ಮೊಹ್ಮದ್ ಯಾಸೀನ್ ಶೇಖ್ ಅಹ್ಮದ್ ಅಲಿ, ಅಜೀಮುದ್ದೀನ್ @ ಅಜ್ಜು ಸಯ್ಯದ್ ಅಲಿ ಮೋದಿನ್ ಹಾಗೂ ರಾಯಚೂರಿನ ಕಾಶಿನಾಥ @ ಕಾಶಿ ಶಂಕರ್ ಬಂಧಿಸಲಾಗಿದೆ.
ಕೊಲೆಯಾದ ನಗರಸಭೆ ಸದಸ್ಯ ಮೊಹ್ಮದ ಶಾಲಂನ ತಮ್ಮನನ್ನ ಕೊಲೆ ಮಾಡಿ ರೇಲ್ವೆ ಹಳಿಗೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗೋರಾ ಮಾಸೂಮ್ ವಿರುದ್ಧ ನಡೆದುಕೊಂಡಿದ್ದಾನೆಂದು, ದ್ವೇಷದಿಂದ ಸದಸ್ಯನ ಕೊಲೆ ಮಾಡಲಾಗಿದೆ ಎಂದು ಮಾಹಿತಿಯಿಂದ ಗೊತ್ತಾಗಿದೆ.
ಪೊಲೀಸರು ಆರೋಪಿಗಳನ್ನ ಬಂಧಿಸುವ ಜೊತೆಗೆ ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನೂ ವಶಕ್ಕೆ ಪಡೆದಿದ್ದಾರೆ.