ಅಕ್ಬರ ಹತ್ಯೆ ಮಾಡಿದ “ಆರು ದುರುಳ”ರ ಹೆಡಮುರಿಗೆ ಕಟ್ಟಿದ ಹುಬ್ಬಳ್ಳಿ ಪೊಲೀಸರು….
1 min readಹುಬ್ಬಳ್ಳಿ: ಕಳೆದ ಎರಡು ದಿನಗಳ ಹಿಂದೆ ರೌಡಿ ಷೀಟರ್ ನನ್ನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನ ಬಂಧನ ಮಾಡುವಲ್ಲಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರವಿಂದನಗರದಲ್ಲಿ ರೌಡಿ ಷೀಟರ್ ಅಕ್ಬರ ಮುಲ್ಲಾ ಎಂಬಾತನನ್ನ ಕೊಚ್ಚಿ ಕೊಲೆ ಮಾಡಿ, ಸದಾನಂದ ಬುರ್ಲಿ ಎಂಬಾತ ಪೊಲೀಸರಿಗೆ ಶರಣಾಗತಿಯಾಗಿ ‘ನಾನೊಬ್ಬನೇ ಕೊಲೆ ಮಾಡಿದ್ದೆಂದು’ ಹೇಳಿಕೊಂಡಿದ್ದ. ಆದರೆ, ದಕ್ಷ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಈ ಕಟ್ಟು ಕಥೆಯನ್ನ ನಂಬದೇ ತನಿಖೆಯನ್ನ ಚುರುಕುಗೊಳಿಸಿದ್ದರು.
ಹತ್ಯೆಯ ಹಿಂದಿನ ಒಂದೊಂದೆ ಜಾಡನ್ನ ಕೈಗೆ ಹಿಡಿದುಕೊಂಡು ಹೊರಟಾಗ ಆರು ಆರೋಪಿಗಳು ಸಿಕ್ಕು ಬಿದ್ದಿದ್ದಾರೆ. ನವೀನ ಪೆರೂರ, ಈತನ ಸಹೋದರ ರೋಹಿತ, ವರುಣ, ಗೋಪಾಲ ಹಾಗೂ ಮಹೇಶ ಎಂಬುವವರನ್ನ ಬಂಧನ ಮಾಡಲಾಗಿದೆ.
ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಮಾರ್ಗದರ್ಶನದಲ್ಲಿ ಹಳೇಹುಬ್ಬಳ್ಳಿ ಹಾಗೂ ಸಿಸಿಬಿ ಪೊಲೀಸರು ಹತ್ಯೆಯ ಹಿಂದಿನ ರಹಸ್ಯವನ್ನು ಬೇಧಿಸಿದ್ದಾರೆ.