ಮೂವರು ಕೂಡಿಕೊಂಡು ಓರ್ವನ ಕೊಲೆ: ಹರಿಶ್ಚಂದ್ರನಗರದಲ್ಲಿ ಮರ್ಡರ್

ಬಳ್ಳಾರಿ: ಮೂವರು ದುಷ್ಕರ್ಮಿಗಳು ಓರ್ವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಬಳ್ಳಾರಿ-ತಾಳೂರು ರಸ್ತೆಯ ಹರಿಶ್ಚಂದ್ರ ನಗರದಲ್ಲಿ ನಡೆದಿದೆ.
ಬಳ್ಳಾರಿಯ ತಾಳೂರು ರಸ್ತೆ ಕನ್ನಡ ನಗರ ನಿವಾಸಿ ಮಣಿಯನ್ನ ಮೂವರು ಕೂಡಿಕೊಂಡು ಕೊಲೆ ಮಾಡಿದ್ದು, ಹಿಂದಿನ ದ್ವೇಷವೇ ಕಾರಣವೆನ್ನಲಾಗಿದ್ದು, ಕೊಲೆ ಮಾಡಿದ ತಕ್ಷಣವೇ ಮೂವರು ಪರಾರಿಯಾಗಿದ್ದಾರೆ. ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಕೊಲೆಗೆಡುಕರ ಪತ್ತೆಗಾಗಿ ಜಾಲ ಬೀಸಿದ್ದಾರೆ.