ಎಣ್ಣೆ ಎಫೆಕ್ಟ್: ಮೂರೇ ದಿನದಲ್ಲಿ ಕೊಲೆಗೆ ಕೊಲೆ ಮಾಡಿ ಮುಯ್ಯಿ ತೀರಿಸಿಕೊಂಡ ಹತ್ಯಾರಿಗಳು

ಮೈಸೂರ: ಸ್ನೇಹಿತನ ಹತ್ಯೆಗೆ ಗೆಳೆಯರೇ ಕೂಡಿಕೊಂಡು ಪ್ರತಿಕಾರ ತೀರಿಸಿಕೊಂಡ ಘಟನೆ ಗಾಯತ್ರಿಪುರಂ ಪ್ರದೇಶದಲ್ಲಿ ನಡೆದಿದ್ದು, ಕಳೆದ ಮೂರು ದಿನಗಳ ಹಿಂದೆ ಕೊಲೆಯಾಗಿದ್ದವನ ಗೆಳೆಯರೇ ಈ ಕೊಲೆಯನ್ನ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಕ್ಯಾತಮಾರನಹಳ್ಳಿಯ ಅವಿನಾಶ ಎಂಬ ಯುವಕನ ಕೊಲೆ ಮೈಸೂರಿನ ಗಾಯತ್ರಿ ಪುರಂನಲ್ಲಿ ನಡೆದಿದ್ದು. ಇರ್ಫಾನ್ ಅಲಿಯಾಸ್ ಖಾನ್, ಮಹೇಶ ಅಲಿಯಾಸ್ ಡಿಂಕಿ ಕೊಲೆಗೈದು ಪರಾರಿಯಾಗಿದ್ದಾರೆ. ಫೋನ್ ಮೂಲಕ ಕರೆಸಿಕೊಂಡು ಕೊಲೆ ಮಾಡಿರುವ ಆರೋಪಿಗಳನ್ನ ನಜರ್ ಬಾದ್ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಸತೀಶ್ ಎಂಬ ಯುವಕನ ಕೊಲೆ ನಡೆದಿತ್ತು. ಅವಿನಾಶ್ ತಂಡ ಕೊಲೆ ಮಾಡಿದೆ ಎಂಬ ಆರೋಪವಿತ್ತು. ಮೃತ ಸತೀಶ್ ಸ್ನೇಹಿತರಿಂದ ಪ್ರತಿಕಾರ ನಡೆದಿದ್ದು, ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.