ಮುಜರಾಯಿ ದೇವಸ್ಥಾನಗಳು ಓಪನ್ ಮಾಡೋದಿಲ್ವಂತೆ ಸರಕಾರ: ಸಚಿವರ ಹೇಳಿಕೆ
1 min readಉಡುಪಿ: ಸೋಮವಾರದಿಂದ ದೇವಸ್ಥಾನ ತೆರೆಯಲು ನಿರ್ಧರಿಸಲಾಗಿತ್ತು. ಆದರೆ, ಕೇಂದ್ರ ಸರಕಾರದ ಅನುಮತಿ ದೊರೆಯದ ಕಾರಣ ಮುಜರಾಯಿ ದೇವಸ್ಥಾನಗಳು ನಾಳೆ ಓಪನ್ ಆಗಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಮ್ಮ ಬೇಡಿಕೆಗೆ ಕೇಂದ್ರದ ಸಹಮತದ ನಿರೀಕ್ಷೆ ಇತ್ತು. ಕೇಂದ್ರ ಸರ್ಕಾರ ಜೂನ್ 8ರಿಂದ ದೇವಸ್ಥಾನ ತೆರೆಯಲು ಸೂಚಿಸಿದೆ. ಕೇಂದ್ರದ ಆದೇಶ ಪಾಲಿಸುತ್ತೇವೆ. ರಾಜ್ಯದ ಎಲ್ಲಾ ದೇವಾಲಯಗಳು ಜೂ.8 ಕ್ಕೆ ತೆರೆಯಲಿವೆ. ಧಾರ್ಮಿಕ ದತ್ತಿ ಇಲಾಖೆ ಹೊರತಾದ ದೇವಸ್ಥಾನಗಳು ಜೂ.8 ರಿಂದ ಆರಂಭವಾಗಲಿವೆ ಎಂದರು.
ಸಾಮಾಜಿಕ ಅಂತರ, ಮಾಸ್ಕ್ ಧ ರಿಸುವುದು, ಸ್ವಚ್ಛತೆಗೆ ಆದ್ಯತೆ. ಗರ್ಭಗುಡಿಯೊಳಗೆ ಅರ್ಚಕರಿಗೆ ಮಾತ್ರ ಪ್ರವೇಶ. ಗರ್ಭಗುಡಿಯ ಒಳಗೆ ಹೋಗಿ ಮುಟ್ಟಿ ಪೂಜೆ ಮಾಡುವ ಅವಕಾಶ ಇಲ್ಲ. ವಿಸ್ತೃತವಾದ ಮಾರ್ಗಸೂಚಿ ಶೀಘ್ರವೇ ಬಿಡುಗಡೆ ಮಾಡ್ತೇವೆ. ಖಾಸಗಿ ದೇವಾಲಯ, ಮಠ ತೆರೆಯುವುದು ಅವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ದೇವಾಲಯಗಳಲ್ಲಿ ಗಂಧ, ಕುಂಕುಮ ನೀಡಲಾಗುವುದು. ತೀರ್ಥ ಪ್ರಸಾದ ನೀಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಅಧಿಕಾರಿಗಳ ಜೊತೆ ಚರ್ಚಿಸಿ ಮಾರ್ಗಸೂಚಿ ಬಿಡುಗಡೆ. ಧಾರ್ಮಿಕ ಸಮಾರಂಭ, ಜಾತ್ರೆ ಅವಕಾಶ ಇಲ್ಲ. ಲಾಕ್ಡೌನ್ ನಿಂದ ಮುಜರಾಯಿ ದೇವಸ್ಥಾನಗಳಿಗೆ ನಷ್ಟವಾಗಿದೆ. ಶೇ.30 ಕ್ಕೂ ಅಧಿಕ ಆದಾಯಕ್ಕೆ ಕಡಿವಾಣ ಬಿದ್ದಿದೆ. ಏಪ್ರಿಲ್-ಮೇ ತಿಂಗಳ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ ಎಂದು ಕೋಟ ಶ್ರೀನಿವಾಸ ಹೇಳಿದರು.