ಖಡಕ್ ಅಧಿಕಾರಿ “ಮುರುಗೇಶ ಚೆನ್ನಣ್ಣನವರ” ಫೇಕ್ ಅಕೌಂಟ್ ಸೃಷ್ಟಿ…!!!

ಹುಬ್ಬಳ್ಳಿ: ಖಡಕ್ ಅಧಿಕಾರಿಯಾಗಿರುವ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಅವರು ಫೇಸ್ಬುಕ್ ಅಕೌಂಟ್ ಇದ್ದಾಗಲೂ, ನಕಲಿ ಅಕೌಂಟ್ ಸೃಷ್ಟಿ ಮಾಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅವರದ್ದೇ ಪೋಟೊಗಳನ್ನ ಬಳಕೆ ಮಾಡಿಕೊಂಡು ಅಕೌಂಟ್ ಸೃಷ್ಟಿಸಿ ಅಕ್ರಮವೆಸಗಲಾಗಿದೆ. ಈ ಬಗ್ಗೆ ಇನ್ಸಪೆಕ್ಟರ್ ಅವರ ಗಮನಕ್ಕೆ ಬಂದಿದೆ ಎಂದು ಹೇಳಲಾಗಿದೆ.
ನಕಲಿ ಅಕೌಂಟ್ನ ತೆಗೆದು ಆ ಮೂಲಕ ಸ್ನೇಹಿತರ ಬಳಿ ಹಣ ಕೇಳುವ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿಯೇ ದಕ್ಷ ಅಧಿಕಾರಿಯ ಅಕೌಂಟ್ ಕೂಡಾ ಫೇಕ್ ಆಗಿರುವುದು ಅಚ್ಚರಿಯ ಬೆಳವಣಿಗೆ ಆಗಿದೆ.