Posts Slider

Karnataka Voice

Latest Kannada News

ಒಂದೇ ಏಟಿಗೆ 26ಕೋಟಿ ರೂಪಾಯಿ ಬಾಕಿ ಜಮಾ: ಸಚಿವ ಮುನೇನಕೊಪ್ಪ ಮೊದಲ ಯತ್ನದಲ್ಲೇ ಸಿಕ್ಸರ್…!

1 min read
Spread the love

ಬೆಂಗಳೂರು: ಬಹುದಿನಗಳಿಂದ ರೈತರ ಬಾಕಿ ಹಣವನ್ನ ಉಳಿಸಿಕೊಂಡಿದ್ದ ಕಾರ್ಖಾನೆ ಮಾಲೀಕರಿಗೆ ಸಕ್ಕರೆ ಹಾಗೂ ಜವಳಿ ಮತ್ತು ಕೈಮಗ್ಗ ಸಚಿವ ಶಂಕರ ಬ ಪಾಟೀಲ ಮುನೇನಕೊಪ್ಪ ನೀಡಿದ ಖಡಕ್ ಎಚ್ಚರಿಕೆ ಬಿಸಿ ಮುಟ್ಟಿಸಿದೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಚಿವ ಮುನೇನಕೊಪ್ಪ ಅವರು, ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಲ್ಲಿ ಒಟ್ಟು 47.17 ಕೋಟಿ ಬಾಕಿಯಿತ್ತು. ಕಬ್ಬು ಬೆಳೆಗಾರರಿಗೆ ದುಡ್ಡು ಕೊಡಲಿಲ್ಲ ಅಂತ ನೋವಿತ್ತು. ನಾನು ಸಚಿವನಾದ ಮೇಲೆ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಸಭೆ ಮಾಡಿದ್ದೆ. ಎಲ್ಲಾ ಕಾರ್ಖಾನೆ ಮಾಲೀಕರ ಜತೆ ಸಭೆ ಮಾಡಿದ್ದೆ. ಬಾಕಿ ಹಣ ನೀಡುವಂತೆ ಸೂಚನೆ ನೀಡಿದ್ದೆ. ಹೀಗಾಗಿ 3 ದಿನಗಳ ಒಳಗೆ 26.26 ಕೋಟಿ ಹಣ ಸರ್ಕಾರಕ್ಕೆ ತುಂಬಿದ್ದಾರೆ. ಇನ್ನು 15.91 ಕೋಟಿ ಮಾತ್ರ ಬಾಕಿ ಉಳಿದಿದೆ ಎಂದು ಹೇಳಿದರು.

ಬಸವೇಶ್ವರ ಶುಗರ್, ಕೋರ್ ಬೀನ್ ಶುಗರ್ಸ್ ಬಾಕಿ ಹಣ ಕೊಟ್ಟಿಲ್ಲ. ಹೀಗಾಗಿ ಎರಡು ಕಾರ್ಖಾನೆಗೆ ರಿಕವರಿ ನೊಟೀಸ್ ನೀಡಿದ್ದೇವೆ. ಆದಷ್ಟು ಬೇಗ ಅವ್ರು ಕೂಡಾ ಬಾಕಿ ಹಣ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಕ್ರಮ ವಹಿಸುತ್ತೇವೆ ಎಂದರು.

2020-21 ನೇ ಸಾಲಿನಲ್ಲಿ ಮಾತ್ರ ಹಣ ಬಾಕಿ ಇತ್ತು. 2020 ಹಿಂದಿನ ಯಾವುದೇ ಕಾರ್ಖಾನೆ ಬಾಕಿ ಉಳಿಸಿಕೊಂಡಿಲ್ಲ. ರೈತ ಕಬ್ಬು ಕೊಟ್ಟಾಗ ಕಾರ್ಖಾನೆಗಳು ಹಣ ಕೊಡಬೇಕು. ರೈತರ ಹಿತ ಕಾಪಾಡೋದು ನಮ್ಮ ಸರ್ಕಾರದ ಉದ್ದೇಶವೆಂದರು.

ಕಬ್ಬು ದರ ಹೆಚ್ಚಳ ವಿಚಾರ: ಈ ಬಗ್ಗೆ ಕೇಂದ್ರದ ಮಂತ್ರಿಗಳ ಜತೆ ಎರಡು ಬಾರಿ ಭೇಟಿಯಾಗಿ ಮಾತಾಡಿದ್ದೇನೆ. ಕೇಂದ್ರದ ಜೊತೆ ಚರ್ಚೆ ಮಾಡಿ ಹೆಚ್ವಳ ಬಗ್ಗೆ ನಿರ್ಧಾರ ಮಾಡ್ತೀವಿ.

ರೈತರ ಪ್ರತಿಭಟನೆ ವಿಚಾರ: ನಾವು ರೈತರ ಪ್ರತಿಭಟನೆಯನ್ನ ನಾವು ಹತ್ತಿಕ್ಕೋದಿಲ್ಲ. ಅವ್ರು ಅವ್ರ ಬೇಡಿಕೆ ಕೇಳೋದು ತಪ್ಪಲ್ಲ. ವಿಧಾನಸೌಧಕ್ಕೆ ಬಂದರೆ ನಾನೇ ಸರ್ಕಾರ ಪರ ಹೋಗಿ ಮನವಿ ಸ್ವೀಕಾರ ಮಾಡ್ತೀನಿ. ರೈತರ ಪರ ಈ ಸರ್ಕಾರ ಇದೆ. ಅವ್ರಿಗೆ ಅನುಕೂಲ ಮಾಡಿಕೊಡೋದು ನಮ್ಮ ಸರ್ಕಾರದ ಆದ್ಯತೆ ಎಂದು ಹೇಳಿದರು.

ಇನ್ಮುಂದೆ ರಾಜ್ಯದಲ್ಲಿ ಏಕ ಕಾಲಕ್ಕೆ ಕಬ್ಬಿನ ಕಾರ್ಖಾನೆ ಪ್ರಾರಂಭ ಮಾಡಬೇಕು. ಈ‌ ಬಗ್ಗೆ ಈಗಾಗಲೇ  ಎಲ್ಲಾ ಕಬ್ಬು ಕಾರ್ಖಾನೆ ಮಾಲೀಕರ ಜೊತೆ ಮಾತಾಡಿದ್ದೇನೆ. ಕೆಲವರು ತಮಗೆ ಬೇಕಾದ ಸಮಯದಲ್ಲಿ ಕಾರ್ಖಾನೆ ಪ್ರಾರಂಭ ಮಾಡ್ತಾರೆ. ಇದ್ರೀಂದ ಅನೇಕ ಸಮಸ್ಯೆ ಆಗ್ತಿದೆ. ಹೀಗಾಗಿ ಎಲ್ಲಾ ಕಾರ್ಖಾನೆಗಳಿಗೆ ಏಕ ಕಾಲಕ್ಕೆ ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಮತ್ತೊಂದು ಸಭೆ ಮಾಡಿ ಈ ಬಗ್ಗೆ ನಿರ್ಧಾರ ಮಾಡ್ತೀವಿ ಎಂದರು.

ಕಬ್ಬು ಬೆಳೆಗಾರರು ಆತಂಕಕ್ಕೆ ಒಳಗಾಗೋದು ಬೇಡ. ಇವತ್ತು ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡ್ತೇನೆ. ರೈತರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡ್ತೇನೆ. ಎಫ್ ಆರ್ ಪಿ ದರ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡಬೇಕಾಗುತ್ತದೆ. ನಾನು ಸಚಿವನಾದ ಮೇಲೆ ಎರಡು ಬಾರಿ ಕೇಂದ್ರ ಸಕ್ಕರೆ ಸಚಿವರೊಂದಿಗೆ ಮಾತುಕತೆ ಮಾಡಿದ್ದೇನೆ. ನಾನು ಸಚಿವನಾದ ಮೇಲೆ ಮೊದಲ ಹೆಜ್ಜೆ ಇಟ್ಟಿದ್ದೇನೆ, ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೇನೆ. ಸರ್ಕಾರ ನೊಟೀಸ್ ಕೊಟ್ಟ ಮೇಲೆ 5 ಫ್ಯಾಕ್ಟರಿ ಗಳು ಬಾಕಿ ಹಣ ಪೂರ್ತಿ ನೀಡಿವೆ. ಸಕ್ಕರೆ ಉದ್ಯಮ ನಷ್ಟದಲ್ಲೇನೂ ಇಲ್ಲವೆಂದರು.

ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ರೈತರ ಹಿತ ಕಾಪಾಡುತ್ತೇವೆ. ಕೆಲವರಿಗೆ ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಪ್ರತಿಷ್ಟೆಗೆ ಬಿದ್ದಿದ್ದಾರೆ. ಕೆಲವರು ಖಾಸಗಿಯವರಿಗೆ ಕೊಡಿ ಅಂತ ಒತ್ತಾಯ ಮಾಡಿದ್ದಾರೆ. ಮತ್ತೆ ಕೆಲವರು ಸರ್ಕಾರವೇ ನಡೆಸಲಿ ಅಂತ ಒತ್ತಾಯ ಮಾಡಿದ್ದಾರೆ. ಇದುವರೆಗೆ ಮೈಶುಗರ್ ಸಕ್ಕರೆ ಕಾರ್ಖಾನೆಗೆ 550 ಕೋಟಿ ಹಣ ನೀಡಲಾಗಿದೆ. ಅದೆಲ್ಲ ಲೆಕ್ಕ ಬರಬೇಕು. ಕ್ಯಾಬಿನೆಟ್ ನಲ್ಲಿ ಇಟ್ಟು ಚರ್ಚೆ ಮಾಡಿ ನಿರ್ಧಾರ ಮಾಡಬೇಕಿದೆ. ಕೆಲವು ಆಂತರಿಕ ವಿಚಾರ ಚರ್ಚೆ ಮಾಡಿ ಮುಂದೆ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಬೇಕಿದೆ. ಕುಮಾರಸ್ವಾಮಿ ಸೇರಿದಂತೆ ಎಲ್ಲಾ ಸಿಎಂಗಳು ಹಣ ನೀಡಿದ್ದಾರೆ. ಆದ್ರು ರೈತರ ಹಿತಕ್ಕಾಗಿ ನಾವು ಕೆಲಸ ಮಾಡ್ತೀವಿ. ಕೆಲ ರಾಜಕೀಯ ನಾಯಕರು ಪ್ರತಿಷ್ಠೆಗೆ ಬಿದ್ದಿದ್ದಾರೆ. ಇದನ್ನ ಮೊದಲು ಬಿಡಬೇಕು. ಶೀಘ್ರವೇ ಸಿಎಂ ಜೊತೆ ಸಭೆ ಮಾಡಿ ಈ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.


Spread the love

Leave a Reply

Your email address will not be published. Required fields are marked *

You may have missed