ಮುನೇನಕೊಪ್ಪ ಪ್ಲಾನ್ ಕ್ಲಿಕ್: ಬಾಪೂಗೌಡ ಪಾಟೀಲ್ ಕ್ಲೀನ್ ಬೋಲ್ಡ್…!

ಧಾರವಾಡ: ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಂಡ ಪರಿಣಾಮ ಕಾಂಗ್ರೆಸ್ ಬೆಂಬಲಿತ ಕೆಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಅಭ್ಯರ್ಥಿ ಮಕಾಡೆ ಮಲಗುವಂತಾಗಿದೆ.
ಮೂಲತಃ ಶಿರೂರ ಗ್ರಾಮದ ನಾಗಪ್ಪ ಬಸವಣ್ಣೆಪ್ಪ ಸಂಕದ ಅವರು ಕೆಸಿಸಿ ಬ್ಯಾಂಕ್‌ನ ನವಲಗುಂದ ಕ್ಷೇತ್ರದ ಅಭ್ಯರ್ಥಿಯಾಗಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವು ತನ್ನದಾಗಿಸಿಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಾಪೂಗೌಡ ಪಾಟೀಲ ಏಳು ಮತದಿಂದ ಪರಾಭವಗೊಂಡಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಕ್ಷೇತ್ರದ ಮತದಾರರೊಂದಿಗೆ ಮಾತನಾಡಿದ್ದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ಗೆಲುವನ್ನ ಈ ಮೂಲಕ ಸಾಧಿಸಿದ್ದಾರೆ.
ಭಾರತೀಯ ಜನತಾ ಪಕ್ಷವನ್ನ ಬಿಟ್ಟು ಹೋಗುತ್ತಾರೆ ಎಂದು ಮುನೇನಕೊಪ್ಪ ಅವರ ಬಗ್ಗೆ ವದಂತಿ ಹಬ್ಬಿಸುತ್ತಿರುವ ಕುಹಕಿಗಳು ಮುಟ್ಟಿ ನೋಡಿಕೊಳ್ಳುವಂತೆ ಬಿಜೆಪಿ ಅಭ್ಯರ್ಥಿ ಸಂಕದ ಅವರನ್ನ ಮುನೇನಕೊಪ್ಪ ಗೆಲ್ಲಿಸಿದ್ದಾರೆ.