ನಿಗಮದ ಮೊದಲ ಸಭೆಯಲ್ಲಿ ಮುನೇನಕೊಪ್ಪ ಭಾಗಿ: ಅಧಿಕಾರಿಗಳಿಗೆ ಖಡಕ್ ಸೂಚನೆ
ಬೆಂಗಳೂರು: ಮೂಲಭೂತ ಸೌಕರ್ಯ ನಿಗಮದ ಜವಾಬ್ದಾರಿಯನ್ನ ವಹಿಸಿಕೊಂಡ ನಂತರ ಮೊದಲ ಬಾರಿಗೆ ಸಚಿವರು- ಅಧಿಕಾರಿಗಳೊಂದಿಗೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಇಂದು ಸಭೆ ನಡೆಸಿದರು.
ರಾಜ್ಯದಲ್ಲಿ ನಡೆದಿರುವ ಪ್ರಮುಖ ಕಾಮಗಾರಿಗಳ ಬಗ್ಗೆಯೂ ಮಾಹಿತಿಯನ್ನ ಪಡೆದು ಸರಕಾರದ ಗಮನದಲ್ಲಿಟ್ಟು ಕಾಮಗಾರಿ ಆರಂಭಿಸಲು ಯೋಜನೆ ರೂಪಿಸುವುದಕ್ಕಾಗಿ ತಕ್ಷಣ ಮುಂದಾಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ರಾಜ್ಯದ ಹಲವೆಡೆ ನಡೆದಿರುವ ಮೂಲ ಸೌಲಭ್ಯ ಮತ್ತು ಒಳಚರಂಡಿ ಕಾಮಗಾರಿಗಳ ಬಗ್ಗೆ ಸಚಿವ ಬೈರತಿ ಬಸವರಾಜ ಕೂಡಾ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಹಿರಿಯ ಅಧಿಕಾರಿಗಳು ನಿಗಮದ ಅಧ್ಯಕ್ಷ ಶಂಕರ ಪಾಟೀಲಮುನೇನಕೊಪ್ಪರಿಗೆ ಮಾಹಿತಿಯನ್ನ ನೀಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆಯೂ ಇದೇ ಸಮಯದಲ್ಲಿ ಮಾಹಿತಿಯನ್ನ ಪಡೆದು, ಸಾಧ್ಯವಾದಷ್ಟು ಬೇಗ ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ನೀಡಲು ಮುಂದಾಗಬೇಕೆಂದು ಸೂಚಿಸಿದರು.
ಶಾಸಕ ಶಂಕರ ಪಾಟೀಲಮುನೇನಕೊಪ್ಪ ಮೊದಲ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆಗಳನ್ನ ನೀಡಿದ್ದು, ಕಾಮಗಾರಿಗಳನ್ನ ಬೇಗನೇ ಮುಗಿಸುವಂತೆ ತಾಕೀತು ಮಾಡಿದ್ದಾರೆ.